
ಬಿ-ಆರ್ಕಿಟೆಕ್ಚರ್ ಮತ್ತು ಬಿ-ಪ್ಲ್ಯಾನಿಂಗ್: ಎಕ್ಸ್‌ಪರ್ಟ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ
Friday, February 28, 2025
ಮಂಗಳೂರು: ಮಂಗಳೂರಿನ ವಳಚ್ಚಿಲ್ ಹಾಗೂ ಕೊಡಿಯಾಲ್‌ಬೈಲ್‌ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಕೆ. ರೆಹಾನ್ ಮೊಹಮ್ಮದ್ ಎಂಬ ವಿದ್ಯಾರ್ಥಿ ಬಿ-ಆರ್ಕಿಟೆಕ್ಚರ್‌ನಲ್ಲಿ 99.7689380 ಹಾಗೂ ಬಿ.ಪ್ಲ್ಯಾನಿಂಗ್‌ನಲ್ಲಿ 99.9838675 ಪರ್ಸೆಟೈಲ್ ಪಡೆದು ಅಭೂತ ಪೂರ್ವ ಸಾಧನೆ ಮಾಡಿದ್ದಾರೆ.
ದೇಶದಲ್ಲಿರುವ ಎನ್‌ಐಟಿಗಳಲ್ಲಿನ ಆರ್ಕಿಟೆಕ್ಚರ್ ಕೋರ್ಸ್‌ನ ಪ್ರವೇಶಕ್ಕಾಗಿ ನಡೆದ ಪರೀಕ್ಷೆ ಇದಾಗಿದ್ದು, ಜೆಇಇ ಮೈನ್‌ನ ಬಿ-ಆರ್ಕಿಟೆಕ್ಚರ್ ಪರೀಕ್ಷೆಯಲ್ಲಿ ಅಬ್ದುಲ್ ಖಾದರ್ ಮನ್ಸೂರ್ ಮೊಮಿನ್ 98.0246466, ಡಿ. ಚಿನ್ಮಯ ಗೌಡ 96.8602755, ಶೈವಿ ಕೆ.ಎಚ್. 95.9405582 ಹಾಗೂ ಅಮೃತ ಸಂತೋಷ್ ಜಕಾತಿ 90.1889271 ಪರ್ಸೆಟೈಲ್ ಪಡೆದಿದ್ದಾರೆ.
ಅದೇ ರೀತಿ ಬಿ ಪ್ಲ್ಯಾನಿಂಗ್‌ನಲ್ಲಿ ಕಿರಣ್ ಯಲಗೊಂಡ್ ಸುರಗಿಹಳ್ಳಿ 91.1755216 ಪರ್ಸೆಟೈಲ್ ಪಡೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಶ್ರಮದ ಸಾಧನೆಯನ್ನು ಕಾಲೇಜಿನ ಹಾಗೂ ಆಡಳಿತ ಮಂಡಳಿಯ ಪರವಾಗಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.