
ರಿಕ್ಷಾಕ್ಕೆ ಹಿಂದಿನಿಂದ ಕಾರು ಢಿಕ್ಕಿ: ಚರಂಡಿಗೆ ಬಿದ್ದ ರಿಕ್ಷಾ, ಚಾಲಕ ಗಂಭೀರ
Friday, March 14, 2025
ಬಂಟ್ವಾಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ಆಟೋ ರಿಕ್ಷಾವೊಂದಕ್ಕೆ ಇನ್ನೋವಾ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚರಂಡಿಗೆ ಬಿದ್ದ ಘಟನೆ ಶುಕ್ರವಾರ ನಡೆದಿದೆ.
ಪರಿಣಾಮ ರಿಕ್ಷಾ ಚರಂಡಿಗೆ ಬಿದ್ದಿದ್ದು, ಚಾಲಕ ಗಂಭೀರ ಸ್ವರೂಪದ ಗಾಯಗೊಂಡಿದ್ದಾರೆ. ಮತ್ತೋರ್ವ ಪ್ರಯಾಣಿಕ ಕೂಡ ಗಾಯಗೊಂಡಿದ್ದು, ಮಂಗಳೂರಿನಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಗಾಯಾಳುಗಳ ಹೆಸರು, ವಿಳಾಸ ಲಭ್ಯವಾಗಿಲ್ಲ.
ಕಲ್ಲಡ್ಕದ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಇನೋವಾ ಕಾರು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು, ಕೇಸು ದಾಖಲಿಸಿಕೊಂಡಿದ್ದಾರೆ.