
ಹೃದಯಾಘಾತಕ್ಕೆ ವೃದ್ದ ಸಾವು
Tuesday, March 4, 2025
ಬಂಟ್ವಾಳ: ಸಿಮೆಂಟ್ ರಿಂಗ್ ಅಳವಡಿಸುವ ಕಾರ್ಮಿಕರೋರ್ವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಬಿ.ಸಿ. ರೋಡಿನಲ್ಲಿ ಸಂಭವಿಸಿದೆ.
ಕೇರಳ ರಾಜ್ಯದ ಕೊಲಂ ಜಿಲ್ಲೆ ಪೊಂಕಾಲವಿಲ ನಿವಾಸಿ ಲಕ್ಷ್ಮಣನ್ (69) ಅವರು ಮೃತಪಟ್ಟವರಾಗಿದ್ದಾರೆ.
ಇವರು ಕೆಲಸದಲ್ಲಿ ನಿರತರಾಗಿರುವ ವೇಳೆ ಏಕಾಏಕಿ ಬಾಯಿ ಮತ್ತು ಮೂಗಿನಿಂದ ಕಪ್ಪು ರಕ್ತ ವಾಂತಿ ಮಾಡಿದ್ದು, ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶ್ರೀಕುಮಾರ್ ಎಸ್. ಎಂಬವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.