
ಅಕ್ರಮ ಪ್ರವೇಶಗೈದು ತೆಂಗಿನಮರ: ಪೈಪ್‌ಲೈನ್‌ಗೆ ಹಾನಿ
Tuesday, March 4, 2025
ಬಂಟ್ವಾಳ: ಅಮ್ಟಾಡಿ ಗ್ರಾಮದ ತಿಮ್ಮರೋಡಿ ಎಂಬಲ್ಲಿನ ವಿನ್ಸೆಂಟ್ ಅಶೋಕ ಲೋಬೊ ಎಂಬವರ ಜಾಗಕ್ಕೆ ವ್ಯಕ್ತಿಯೋರ್ವರು ಅಕ್ರಮ ಪ್ರವೇಶಗೈದು ತೆಂಗಿನ ಮರ ಹಾಗೂ ಪೈಪ್‌ಲೈನ್‌ಗೆ ಹಾನಿಗೈದ ಘಟನೆ ಸಂಭವಿಸಿದೆ.
ಜೆರಾಲ್ಡ್ ಕ್ರಾಸ್ತಾ ಎಂಬವರು ಅಕ್ರಮ ಪ್ರವೇಶಗೈದು, ಹಿಟಾಚಿ ಮೂಲಕ ವಿನ್ಸೆಂಟ್ ಅಶೋಕ ಲೋಬೊ ಅವರ ಜಾಗದಲ್ಲಿದ್ದ 75 ತೆಂಗಿನ ಮರ ಹಾಗೂ ನೀರಿನ ಪೈಪ್‌ಗಳನ್ನು ನಾಶಮಾಡಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಮತ್ತೊರ್ವ ರೋನಾಲ್ಡ್ ಕ್ರಾಸ್ತಾ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ್ದಾನೆಂದು ದೂರಲಾಗಿದೆ. ಈ ಕೃತ್ಯದಿಂದ ಲೋಬೋ ಅವರಿಗೆ ಸುಮಾರು 1 ಲಕ್ಷ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.