ಡಿವೈಡರ್ ಮೇಲೇರಿ ಲಾರಿಗೆ ಢಿಕ್ಕಿಯಾದ ಕಾರು

ಡಿವೈಡರ್ ಮೇಲೇರಿ ಲಾರಿಗೆ ಢಿಕ್ಕಿಯಾದ ಕಾರು


ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಮೇಲೇರಿ ಲಾರಿಗೆ ಢಿಕ್ಕಿ ಹೊಡೆದು ಬಳಿಕ ಪಲ್ಟಿಯಾದ ಘಟನೆ ರಾ.ಹೆ.ಯ ತುಂಬೆ ರಾಮಲ್ ಕಟ್ಟೆಯಲ್ಲಿ ಶನಿವಾರ ನಡೆದಿದೆ.

ಈ ಘಟನೆಯಿಂದಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ಮೂಲದ ಅಬ್ದುಲ್ ಗಫೂರ್ ಎಂಬವರು ಗಾಯಗೊಂಡಿದ್ದಾರೆ.

ಚಾಲಕ ಅಬ್ದುಲ್ ರಹಮಾನ್ ಯಾವುದೇ ಗಾಯವಿಲ್ಲದೆ ಪಾರಾಗಿದ್ದಾರೆ. ಬೆಳ್ತಂಗಡಿ ಕಡೆಯಿಂದ ಮಂಗಳೂರಿನತ್ತ ಸಂಚರಿಸುವ ವೇಳೆ ರಾಮಲ್ ಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿತು.

ಈ ಸಂದರ್ಭ ಮಂಗಳೂರಿನಿಂದ ಬಿ.ಸಿ.ರೋಡಿನತ್ತ ಬರುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article