
ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವ: ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ
ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಇನ್ ಟೈಮ್ ಗ್ರೂಪಿನ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎನ್. ಅಶೋಕನ್ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಮಂಗಳಾದೇವಿಯ ಆಡಳಿತ ಮೊಕ್ತೇಸರ ಎಂ. ಅರುಣ್ ಐತಾಳರು, ಅನುವಂಶಿಕ ಮೊಕ್ತೇಸರ ಹಾಗೂ ಪರ್ಯಾಯ ಪ್ರಧಾನ ಅರ್ಚಕ ಜಿ. ರಘುರಾಮ ಉಪಾಧ್ಯಾಯ, ಎಸ್. ಹರೀಶ್ ಐತಾಳ್, ಮಾಜಿ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ, ಕದ್ರಿಯ ಮಲ್ಲಿಕ ಕಲಾ ವೃಂದದ ಅಧ್ಯಕ್ಷ, ಧಾರ್ಮಿಕ ಮುಂದಾಳು ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು. ವಿನಯಾನಂದ ಕೆ. ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರ ಮಂಗಳಾದೇವಿ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನ್ನು ಶ್ರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವದ ಪರ್ವಕಾಲದಲ್ಲಿ ಉತ್ಸವದ ಪ್ರಥಮ ದಿನ ಮಂಗಳವಾರ ಉದ್ಘಾಟನೆಗೊಂಡಿತು. ಈ ಪ್ರಾಜೆಕ್ಟ್ ಅನ್ನು ಬ್ಯಾಕ್ ಸ್ಪೇಸ್ ಅಪ್ಲಿಕೇಶನ್ ಇದರ ಸಿ.ಇ.ಓ. ಮನೋಜ್ ಹೆಗ್ಡೆ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ನಮ್ಮ ಪುರಾತನ ಪರಂಪರೆಯನ್ನು ಡಿಜಿಟಲ್ ಯುಗಕ್ಕೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯೊಂದಿಗೆ, ಈ ವೆಬ್‌ಸೈಟ್ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ನಮ್ಮ ಶ್ರೀ ಮಂಗಳಾದೇವಿ ದೇವಸ್ಥಾನದ ಇತಿಹಾಸ, ಪೂಜಾ ಸೇವೆಗಳ ವಿವರಗಳು, ಉತ್ಸವಗಳ ಮಾಹಿತಿ ಹಾಗೂ ಅಗತ್ಯವಿರುವ ಸೇವೆಗಳ ಎಲ್ಲವೂ ಒಂದೇ ಕ್ಲಿಕ್ಕಿನಲ್ಲಿ ಲಭ್ಯವಾಗುವಂತೆ ಮಾಡಲಿದೆ.
ಈ ಪ್ರಾಜೆಕ್ಟ್‌ನ್ನು ಬ್ಲಾಕ್ಟ್ ಸ್ಪೇಸ್ ಕಂಪನಿಯು ಯಶಸ್ವಿಯಾಗಿ ರೂಪಿಸಿ, ಕಾರ್ಯಗತಗೊಳಿಸಿದ್ದು. ದೇವಸ್ಥಾನದ ಮಾಹಿತಿಯನ್ನು ತಂತ್ರಜ್ಞಾನದಿಂದ ಸಮಗ್ರವಾಗಿ ಪ್ರಸ್ತುತಪಡಿಸಲು ಪ್ರಯತ್ನಿಸಿದೆ.