ಡೌನ್ ಸಿಂಡ್ರೋಮ್ ಮಕ್ಕಳಿಗಾಗಿ ಕ್ರೀಡಾಕೂಟ

ಡೌನ್ ಸಿಂಡ್ರೋಮ್ ಮಕ್ಕಳಿಗಾಗಿ ಕ್ರೀಡಾಕೂಟ


ಮಂಗಳೂರು: ವಿಶ್ವ ಡೌನ್ ಸಿಂಡೋಮ್ ದಿನಾಚರಣೆ ಪ್ರಯುಕ್ತ ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಡೌನ್ ಸಿಂಡ್ರೋಮ್ ಮಕ್ಕಳಿಗಾಗಿ ಹಮ್ಮಿಕೊಳ್ಳಲಾದ ಬೋಚಿ ಚ್ಯಾಂಪಿಯನ್‌ಶಿಪ್ 2025 ಕ್ರೀಡಾಕೂಟವನ್ನು ಸೈಂಟ್ ಅಲೋಶಿಯಸ್ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ವಂ.ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಶುಕ್ರವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಲಯನ್ ಮೊಯಿದೀನ್ ಕುಂಞಿ ಭಾಗವಹಿಸಿದರು. ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಉಷಾ ಬಳ್ಳಾಲ್ ಅತಿಥಿಗಳಾಗಿ ಭಾಗವಹಿಸಿದ್ದರು. 

ದ.ಕ., ಉಡುಪಿ ಹಾಗೂ ಕೊಡಗು ಜಿಲ್ಲೆಯ 15 ಶಾಲೆಗಳ ತಂಡಗಳು ಬೋಚಿ ಸ್ಪರ್ಧೆಯಲ್ಲಿ ಭಾಗ ವಹಿಸಿದ್ದವು. ಪುರುಷರ ವಿಭಾಗದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕ್ರಮವಾಗಿ ಮಾನಸ ವಿಶೇಷ ಶಾಲೆ ಪಾಂಬೂರು, ಬೆಥನಿ ಜೀವನ ಜ್ಯೋತಿ ಮಾರ್ದಲ, ಕಡಬ ಹಾಗೂ ಸಾನಿಧ್ಯ ವಿಶೇಷ ಶಾಲೆ ಶಕ್ತಿನಗರ ಪಡೆದುಕೊಂಡಿತು. ಮಹಿಳೆಯರ ವಿಭಾಗದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಕ್ರಮವಾಗಿ ಸಾನಿಧ್ಯ ವಸತಿಯುತ ಶಾಲೆ ಶಕ್ತಿನಗರ, ಸೈಂಟ್ ಮೇರಿಸ್ ವಿಶೇಷ ಶಾಲೆ ಕಿನ್ನಿಗೋಳಿ ಹಾಗೂ ಲಯನ್ಸ್ ವಿಶೇಷ ಶಾಲೆ ಸುರತ್ಕಲ್ ಪಡೆದುಕೊಂಡಿತು. 

ಬಹುಮಾನವು, ನಗದು, ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿತ್ತು. ನೂರಕ್ಕೂ ಮಿಕ್ಕಿ ಡೌನ್ ಸಿಂಡ್ರೋಮ್ ಮಕ್ಕಳು ಹಾಗೂ ಅವರ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article