
ಜಿಲ್ಲೆಯಲ್ಲಿ ಗೋಮಾಂಸ ಮಾಫಿಯಾ ಮಟ್ಟ ಹಾಕಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಒತ್ತಾಯ
ಮಂಗಳೂರು: ಜಿಲ್ಲೆಯಾದ್ಯಂತ ಕಾನೂನು ಕಾಯ್ದೆಗಳ ಮೀರಿ ಪ್ರತಿದಿನ ನೂರಾರು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಹಾಗೂ ಗೋಹತ್ಯೆಯನ್ನು ನಡೆಸುವ ದೊಡ್ಡ ಗೋಮಾಂಸ ಮಾಫಿಯಾ ಕಾರ್ಯಾಚರಿಸುತ್ತಿದ್ದು ತಕ್ಷಣ ಅದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಮತ್ತು ಪೊಲೀಸ್ ಇಲಾಖೆಯನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಗ್ರಹಿಸಿದೆ.
ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್., ಕಳೆದ 2 ವಾರಗಳಿಂದ 4 ಕಡೆ ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ ಬಜರಂಗದಳ ಕಾರ್ಯಕರ್ತರು ಕೊಟ್ಟ ಮಾಹಿತಿ ಮೇರೆಗೆ ಪೊಲಿಸರು ವಾಹನಗಳನ್ನು ತಡೆದು ಅಂದಾಜು ಒಂದು ಟನ್ ಗೂ ಅಧಿಕ ಅಕ್ರಮ ಗೋಮಾಂಸ ಪೊಲೀಸರು ವಶಪಡಿಸುವ ಉತ್ತಮ ಕಾರ್ಯ ಮಾಡಿದರೂ ಅಪರಾಧಿಗಳನ್ನು ಬಂಧಿಸುವ ಹಾಗೂ ಇನ್ನಿತರ ಮುಂದಿನ ಕ್ರಮಗಳನ್ನು ಜರಗಿಸಿಲ್ಲ, ಅಕ್ರಮ ಕಸಾಯಿಖಾನೆಗಳು ಜಿಲ್ಲೆಯಲ್ಲಿ ಅವ್ಯಾತವಾಗಿ ನಡೆಯುತ್ತಿದ್ದು ಸುರತ್ಕಲ್, ಜೋಕಟ್ಟೆ, ತಣ್ಣೀರು ಬಾವಿ, ಕುದ್ರೋಳಿ ಮತ್ತು ಫರಂಗಿಪೇಟೆ, ಸೂರಲ್ಪಾಡಿ, ಹಂಡೇಲು, ಕಾರ್ನಾಡು ಈ ಜಾಗಗಳಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿಫಲವಾಗಿದೆ. ಗೋ ಹತ್ಯೆ ಅಕ್ರಮ ಗೋಸಾಗಾಟದ ಬಗ್ಗೆ ಸಂಘಟಿತವಾಗಿ ಕಾರ್ಯಾಚರಿಸುತ್ತಿರುವ ಗೋಮಾಂಸ ಮಾಫಿಯವನ್ನು ಮಟ್ಟ ಹಾಕಿ ಈ ಕೆಳಗಿನ ಕ್ರಮ ಕೈಗೊಳ್ಳಲು ನಮ್ಮ ಬೇಡಿಕೆ ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ತಿಳಿಸುತ್ತಾ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗೋ ಮಾಂಸದ ಪ್ರಕರಣಗಳಲ್ಲಿ ವಶಪಡಿಸಿದ ಗೋಮಾಂಸಗಳು ಯಾವ ಕಸಾಯಿಖಾನೆಯಿಂದ ತಂದದ್ದು ಎಂದು ಗುರುತಿಸಿ ಮಹಜರು ಆಗಬೇಕು. ಮತ್ತು ಗೋವುಗಳನ್ನು ಕಳವು ಮಾಡಿ ವಧೆ ಮಾಡಿರುವ ಸಂಶಯವಿದ್ದು ಇದರ ಬಗ್ಗೆ ಕೊಲಂಕುಷ ತನಿಖೆ ನಡೆಸಬೇಕು, ಗೋಮಾಂಸ ಯಾರಿಗೆ ಮಾರಾಟಕ್ಕೆ ಕೊಂಡೊಯ್ಯುತ್ತಲಾಗುತ್ತಿತ್ತು ಎಂದು ತನಿಖೆ ನಡೆಸಿ ಗೋಮಾಂಸ ಖರೀದಿ ಮತ್ತು ಮಾರಾಟ ಮಾಡುವವರನ್ನು ಬಂಧಿಸಿ ಪ್ರಕರಣ ದಾಖಲಿಸಬೇಕು, ಗೋವುಗಳನ್ನು ತಂದ ವಾಹನಗಳನ್ನು ಗುರುತಿಸಿ ವಶಪಡಿಸಬೇಕು, ಗೋವುಗಳ ವಧೆ ನಡೆದ ಮನೆಯನ್ನು ಶಾಶ್ವತವಾಗಿ ಸರಕಾರಕ್ಕೆ ಮುಟ್ಟುಗೊಲು ಹಾಕುವಂತೆ ಸಕಲ ಕ್ರಮ ಕೈಗೊಳ್ಳಬೇಕು, ವಶಪಡಿಸಿದ ಗೋಮಾಂಸ ವನ್ನು ಯಾವ ಅಕ್ರಮ ಕಸಾಯಿಖಾನೆಯಿಂದ ಗೋವಧೆ ಮಾಡಿದ್ದರು ಆ ಕಸಾಯಿಖಾನೆ/ ಮನೆ ಮಾಲೀಕನನ್ನು ಬಂಧಿಸಿ ಅವರಿಗೆ ಗರಿಷ್ಠ ಶಿಕ್ಷ ಆಗುವಂತೆ ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಿರುವ ಕಸಾಯಿ ಖಾನೆಗಳ ಕಟ್ಟಡಗಳನ್ನೆಲ್ಲ ಮುಟ್ಟುಗೋಲು ಹಾಕಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ದ. ಕ. ಜಿಲ್ಲಾಧ್ಯಕ್ಷ ಎಚ್. ಕೆ. ಪುರುಷೋತ್ತಮ, ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ, ಪ್ರದೀಪ್ ಸರಿಪಳ್ಳ ಮೊದಲಾದವರಿದ್ದರು.