
ಶಿರ್ವ ಕೋಡು ಶ್ರೀದುರ್ಗಾಂಬಿಕಾ ಅಂಗನವಾಡಿ ಕೇಂದ್ರದಲ್ಲಿ ಕಳವು: ಪ್ರಕರಣ ದಾಖಲು
Saturday, March 22, 2025
ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡು ಶ್ರೀದುರ್ಗಾಂಬಿಕಾ ಅಂಗನವಾಡಿ ಕೇಂದ್ರದಲ್ಲಿ ಮಾ.20 ರಂದು ಸಂಜೆಯಿಂದ ಮಾ.21 ರ ಮುಂಜಾನೆಯ ಅವಧಿಯೊಳಗೆ ಅಂಗನವಾಡಿ ಕಂಪೌಂಡ್‌ವಾಲ್ ಗೇಟ್ ಬೀಗ ಮತ್ತು ಮುಖ್ಯದ್ವಾರದ ಬೀಗ ಮುರಿದು ಸ್ಟೋರ್ ರಾಮ್‌ನಲ್ಲಿದ್ದ ಗ್ಯಾಸ್ ಅಂಡೆ, ಅಡುಗೆ ಸಿದ್ಧಪಡಿಸುವ ಸಾಮಾಗ್ರಿಗಳು, ಅಹಾರ ಸಾಮಾಗ್ರಿಗಳನ್ನು ಕಳವು ಮಾಡಿ ಹೋಗಿದ್ದು, ಅಂಗನವಾಡಿ ಶಿಕ್ಷಕಿ ಉಷಾದೇವಿ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿದ ಶಿರ್ವ ಪೋಲಿಸರು ಅಂಗನವಾಡಿ ಕೇಂದ್ರಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಅಂಗನವಾಡಿ ಶಿಕ್ಷಕಿಯವರು ಅಂಗನವಾಡಿ ವಲಯ ಮೇಲ್ವಿಚಾರಕಿಯವರಿಗೆ ಮಾಹಿತಿಯನ್ನು ನೀಡಿದ್ದಾರೆ. ಶಿರ್ವ ಪಂಚಾಯತ್‌ಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಿಯ ಜನಪ್ರತಿನಿಧಿಗಳು, ಸ್ಥಳೀಯ ಪ್ರಮುಖರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರ ಅಂದಾಜು ಪ್ರಕಾರ ಹತ್ತು ಸಾವಿರಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಆಹಾರ ಸಾಮಾಗ್ರಿಗಳು ಕಳವಾಗಿದೆ ಎನ್ನಲಾಗಿದೆ.