ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿಗೆ ಉಸ್ತುವಾರಿ ಸಚಿವರು ಸಲ್ಲಿಸಿದ ಸದಸ್ಯರ ಪಟ್ಟಿ ವೈರಲ್

ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿಗೆ ಉಸ್ತುವಾರಿ ಸಚಿವರು ಸಲ್ಲಿಸಿದ ಸದಸ್ಯರ ಪಟ್ಟಿ ವೈರಲ್

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಿಸುವಂತೆ ಮುಜರಾಯಿ ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಲ್ಲಿಸಿದ ಪತ್ರ ವೈರಲ್ ಆಗಿದೆ.

ರಾಜ್ಯದ ಶ್ರೀಮಂತ್ರ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಈಗಾಗಲೇ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ನಡುವೆ ಕಾಂಗ್ರೆಸ್ ಸರಕಾರ ಆಡಳಿತದಲ್ಲಿರುವುದರಿಂದ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಸಮಿತಿ ಸದಸ್ಯರಾಗಿ ನೇಮಕ ಮಾಡುವಂತೆ ಪಕ್ಷದ ನಾಯಕರನ್ನು ಭೇಟಿ ಮಾಡಿ ಒತ್ತಡ ಹಾಕುತ್ತಿದ್ದಾರೆ. 

ಈ ಹಿನ್ನಲೆಯಲ್ಲಿ ಕುಕ್ಕೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ ಮತ್ತಷ್ಟು ವಿಳಂಬವಾಗುತ್ತಲೇ ಸಾಗಿದೆ. ಈ ನಡುವೆ ದಿನೇಶ್ ಗುಂಡೂರಾವ್ ಅವರು 9 ಮಂದಿಯ ಹೆಸರನ್ನು ಪಟ್ಟಿ ಮಾಡಿ ಇವರನ್ನು ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನಾಗಿ ನೇಮಿಸುವಂತೆ ಕೋರಿ ಮುಜರಾಯಿ ಸಚಿವರಿಗೆ ಸಲ್ಲಿಸಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ಪಟ್ಟಿ ಅಂತಿಮ ಆಗಲಿದೆಯಾ ಅಥವಾ ಇದರಲ್ಲಿ ಕೂಡ ಬದಲಾವಣೆ ಆಗಲಿದೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಇದು ಅಧಿಕೃತ ಪತ್ರ ಎಂಬ ಬಗ್ಗೆಯೂ ಯಾವುದೇ ಸ್ಪಷ್ಟನೆ ಇಲ್ಲ.

ಈ ನಡುವೆ ಸದಸ್ಯ ವೈರಲ್ ಆಗಿರುವ ಪಟ್ಟಿಯಲ್ಲಿ ಸದಸ್ಯರಾಗಲು ಆಸಕ್ತರಾಗಿದ್ದು ಹೆಸರು ಇಲ್ಲದಿರುವವರು ಮತ್ತೆ ಉನ್ನತ ಮಟ್ಟದಲ್ಲಿ ಸದಸ್ಯ ಸ್ಥಾನಕ್ಕಾಗಿ ಪೈಪೋಟಿ ನಡುವೆ ಸಾಧ್ಯತೆ ಇದೆ ಎಂದು ಪಕ್ಷದ ಹಂತದಲ್ಲಿ ವ್ಯಕ್ತವಾಗುತ್ತಿರುವ ಮಾತು. ಶೀಘ್ರದಲ್ಲಿ ಕುಕ್ಕೆಗೆ ಹೊಸ ವ್ಯವಸ್ಥಾಪನಾ ಸಮಿತಿ ಘೋಷಣೆ ಆಗುತ್ತೆದೆಯೋ ಅಥವಾ ಮತ್ತಷ್ಟು ವಿಳಂಬ ಆಗುತ್ತದೆಯೋ ಎಂಬುದು ಕೂಡ ಇನ್ನೂ ಅಂತಿಮಗೊಂಡಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article