
ಬ್ರಹ್ಮಣರಿಗೆ ಜನಿವಾರ ಜೀವನದ ಅಸ್ಥಿತ್ವ: ಮಹೇಶ್ ಕಜೆ
ಮಂಗಳೂರು: ಬ್ರಹ್ಮಣರಿಗೆ ಜನಿವಾರ ಕೇವಲ ದಾರವಲ್ಲ. ಅದು ಒಂದು ಜೀವನದ ಆದಾರ, ಅಸ್ಥಿತ್ವ. ಅದು ಸನಾತನ ಧರ್ಮದ ಮುಖ್ಯ ಆದಾರ ಎಂದು ಅಖಿಲ ಭಾರತ ಬ್ರಹ್ಮಣ ಮಹಾಸಭಾದ ಉಪಾಧ್ಯಕ್ಷ, ದ.ಕ. ಜಿಲ್ಲೆಯ ಅಧ್ಯಕ್ಷ ಮಹೇಶ್ ಕಜೆ ತಿಳಿಸಿದರು.
ಅವರು ಇಂದು ನಗರದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಶಿವಳ್ಳಿ ಬ್ರಹ್ಮಣ ಮಂಗಳೂರು ಅವರು ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಜಾಥಾದ ಬಳಿಕ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬ್ರಹ್ಮಸೂತ್ರಕ್ಕೆ ಕೈ ಹಾಕಿದರೆ ಜೇನುಗೂಡಿಗೆ ಕೈ ಹಾಕಿದಾಗೆ ಇರುತ್ತದೆ. ಮೊದಲಿದೆ ಉತ್ತಮ ಸಿಹಿ ಸಿಗುತ್ತದೆ. ಜೇನು ನೊಣಕ್ಕೆ ತೊಂದರೆ ಮಾಡಿದರೆ ಒಗ್ಗಟ್ಟಾಗಿ ಕಚ್ಚುತ್ತದೆ. ನಮ್ಮಲ್ಲಿ ೯ ಉಪಜಾತಿಗಳಿವೆ ಆದರೆ ನಾವು ಎಂದಿಗೂ ಬೇದ ಮಾಡಿಲ್ಲ ಎಲ್ಲರೂ ಒಟ್ಟಾಗಿ ಸೇರಿದ್ದೇವೆ. ಒಂದು ತೊಂದರೆಯಿಂದ ಇಡೀ ಸಮುದಾಯವೇ ಸೇರಿದೆ. ಬ್ರಹ್ಮಣ ಸಮಾಜ ಸಾಗರದಂತೆ ಇದೆ ಅದನ್ನು ಕೆಣಕಲು ಬಂದರೆ ಅಲೆಗಳು ಬಂದು ಅಪ್ಪಿಸುತ್ತವೆ ಎಂದು ಎಚ್ಚರಿಸಿದರು.
ಸಮಾಜದಲ್ಲಿ ಬಿಟೀಷರು ಬಿಟ್ಟು ಹೋದ ಹೊಡೆದು ಆಳುವ ನೀತಿಯನ್ನೇ ಅನುಸರಿಸುತ್ತಿದ್ದಾರೆ. ಬ್ರಹ್ಮಣರಿಗೆ ರಾಜಕೀಯ ಮಾಡುವುದಿಲ್ಲ. ಬ್ರಹ್ಮಣರು ರಾಜಕೀಯ ಮಾಡುವುದು ದೊಡ್ಡ ವಿಷಯವಲ್ಲ. ನಮ್ಮ ರಕ್ತದಲ್ಲಿಯೇ ರಾಜಕೀಯ ಇದೆ ಎಂದು ಎಚ್ಚರಿಸಿದರು.
ತಪ್ಪು ನಡೆದಾಗ ಸಿಇಟಿ ಮುಖ್ಯಸ್ಥರಾದ ಪ್ರಸನ್ನ ಅವರು ಬಂದು ಜನಿವಾರ ತೆಗೆಯಲು ನಾವು ಹೇಳಿಲ್ಲ ಆಗಿರುವ ತಪ್ಪಿಗೆ ಕ್ಷಮೆ ಕೇಳುವುದಾಗಿ ತಿಳಿಸಿದರು ಆದರೆ ದಿನದಿಂದ ದಿನಕ್ಕೆ ಬೇರೆ ಬೇರೆ ಕಡೆಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯುತ್ತಲೇ ಇವೆ, ಇವರು ನಮ್ಮೊಂದಿಗೆ ಕನ್ನಾಮುಚ್ಚಾಲೆ ಆಟವಾಡುತ್ತಿದ್ದಾರೆ. ಅಂಕಿಕ ಪರದೆ ಎಳೆದಿದ್ದಾರೆ ಅಷ್ಟೇ. ಅದನ್ನು ಬಗೆಹರಿಸಿಲ್ಲ ಎಂದರು.
ಇಲ್ಲಿ ಒಬ್ಬ ವಿದ್ಯಾರ್ಥಿಯ ಜನಿವಾರಕ್ಕೆ ಕೈ ಹಾಕಿರುವುದಲ್ಲ. ಪ್ರತಿಯೊಬ್ಬರ ಜನಿವಾರಕ್ಕೂ ಕೈ ಹಾಕಿದ್ದಾರೆ. ಇದು ಕೇವಲ ಬ್ರಹ್ಮಣರ ಮೇಲೆ ಆದ ಹಲ್ಲೆಯಲ್ಲ, ಇಡೀ ಹಿಂದೂ ಸಮಾಜದ ಮೇಲೆ ಆದ ಹಲ್ಲೆ. ಇಲ್ಲಿಯ ತನಕ ಹಿಂದೂ ಧರ್ಮವನ್ನು ಸಂರಕ್ಷಣೆ ಮಾಡಿಕೊಂಡು ಬಂದಂತಹ ಬ್ರಹ್ಮಣರ ಮೇಲೆಯೇ ಕೇಡು ಬಯಸುತ್ತಾರೆ. ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ಭಾರತದ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ನಾವು ಸುಮ್ಮನಿದ್ದೇವೆ ಎಂದು ಅಸಹಾಯಕತೆ ಎನ್ನುವುದು ಬೇಡ ಪರ್ವತ ಶಾಂತವಾಗಿ ಕಾಣುತ್ತಿದೆ ಎಂದು ಬುಡಕ್ಕೆ ಕೈ ಹಾಕಲು ಹೋದರೆ ಅಲ್ಲಿ ಜ್ವಾಲಾಮುಖಿ ಚಿಮ್ಮಿ ಭಷ್ಮವಾಗುತ್ತಾರೆ. ಬ್ರಹ್ಮಣರು ಮೈ ಕೊಡವಿದರೆ ಭೂಮಿ ಕಂಪಿಸುತ್ತದೆ ಎಂದು ಎಚ್ಚರಿಸಿದರು.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನ ಮುಖ್ಯ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಸಮಾಜದ ಏಳಿಗೆಗೆ ದುಡಿದವರು ಬ್ರಹ್ಮಣರು. ಬ್ರಹ್ಮಣರ ಜನಿವಾರ ತೆಗೆಯುವುದು ಎಂದರೆ ಅವರ ಇಡೀ ಜೀವನವನ್ನೇ ತೆಗೆದಂತೆ ಈ ಕೃತ್ಯ ಎಸಗಿದವರನ್ನು ದೇವರು ಹುಡುಕಿ ಶಿಕ್ಷಿಸುತ್ತಾನೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಿಇಟಿ ನೆಪ ಒಡ್ಡಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಘಟನೆ ಇಡೀ ದೇಶ ಖಂಡಿಸುತ್ತದೆ. ಜನಿವಾರದ ಮಹತ್ವವನ್ನು ರಾಜ್ಯ ಸರ್ಕಾರ ಅರಿಯಬೇಕು. ಯಾವ ಅಧಿಕಾರಿ ಜನಿವಾರವನ್ನು ತೆಗೆಸಿದ್ದಾನೆ ಅವನಿಗೆ ತಿಳಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಇಲ್ಲಿಯ ತನಕ ಹಿಂದೂಗಳಿಗೆ ದುಖಃವನ್ನು ನೀಡುತ್ತಾ ಬಂದಿದೆ. ಬ್ರಹ್ಮಣ ಸಮಾಜಕ್ಕೆ ಆರ್ಶೀವಾದ ಕೊಡಲೂ ಗೊತ್ತು, ತಿರುಗಿ ಬೀಳಲೂ ಗೊತ್ತು. ಜನಿವಾರ ತೆಗೆಸಿದ್ದು ರಾಜ್ಯ ಸರ್ಕಾರದ ಅಹಾಂಕಾರ. ಇದನ್ನು ಇಲ್ಲಿಯೇ ಸರಿ ಪಡಿಸಿದರೆ ಸರಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಯುವುದು ಮಾತ್ರವಲ್ಲದೇ, ವಿಧಾನಸೌಧದಲ್ಲಿಯೂ ಈ ವಿಚಾರವನ್ನು ಚರ್ಚಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಂದಾಳು ಪಿ.ಎಸ್. ಪ್ರಕಾಶ್, ಶರುವು ರಾಘವೇಂದ್ರ ಶಾಸ್ತ್ರಿ, ಎಂ.ಎಸ್. ಮಹಾಬಲ ಭಟ್, ಪ್ರದೀಪ್ ಕುಮಾರ್ ಕಲ್ಕೂರ, ಎಂ.ಬಿ. ಪುರಾಣಿಕ್, ಶ್ರೀರಂಗ ಐತಳ್, ಸತೀಶ್ ಕುಂಪಲ, ಹೆಚ್.ಕೆ. ಪುರುಷೋತ್ತಮ್, ಕಮಲಾದೇವಿ ಆಸ್ರಣ್ಣ, ಬುಜಂಗ ಕುಲಾಲ್, ರಾಘವೇಂದ್ರ ಹೆಚ್. ಕೃಷ್ಣಮೂರ್ತಿ, ಗುರುಚರಣ್, ಉದಯ್ಶಂಕರ್ ಶ್ರೀಧರ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಗೂ ಮೊದಲು ಶ್ರೀ ಶರವು ಮಹಾಗಣಪತಿ ದೇವಸ್ಥಾನದಿಂದ ಮಂಗಳೂರು ಮಿನಿ ವಿಧಾನಸೌಧದ ವರೆಗೆ ಜಾಥಾ ನಡೆಯಿತು. ಪ್ರತಿಭಟನೆಯ ನಂತರ ಉಪಾಯುಕ್ತ ಹರ್ಷವರ್ದನ್ ಅವರಿಗೆ ಮನವಿ ನೀಡಲಾಯಿತು.