
ತುಳು ಭಾಷೆಯನ್ನು ಮಾತನಾಡುವುದರಿಂದ ಅದರ ಉಳಿವು: ತಾರನಾಥ ಗಟ್ಟಿ
Wednesday, April 23, 2025
ಶ್ರೀ ಮಹಾವೀರ ಕಾಲೇಜಿನಲ್ಲಿ ತುಳುನಾಡ ಸಿರಿ ‘ಮದಿಪು’-2025ಗೆ ಚಾಲನೆ
ಮೂಡುಬಿದಿರೆ: ಕನಾ೯ಟಕ ತುಳು ಅಕಾಡೆಮಿ ಅಸ್ತಿತ್ವಕ್ಕೆ ಬಂದಾಗಲೇ ತುಳು ಭಾಷೆಗೆ ಮೊದಲ ಮಾನ್ಯತೆ ಸಿಕ್ಕಿದೆ. ನಾವು ತುಳು ಭಾಷೆಯನ್ನು ಮಾತನಾಡುವುದರಿಂದ ಮತ್ತು ಸಂಸ್ಕೃತಿಯನ್ನು ಅರಿತುಕೊಳ್ಳುವುದರಿಂದ ತುಳುವಿನ ಉಳಿವು ಸಾಧ್ಯ ಎಂದು ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಹೇಳಿದರು.
ಅವರು ಶ್ರೀ ಮಹಾವೀರ ಪ್ರಥಮ ದಜೆ೯ ಕಾಲೇಜು ಮೂಡುಬಿದಿರೆ, ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾಥಿ೯ ಸಂಘ ಇವುಗಳ ಜಂಟಿ ಆ ಆಶ್ರಯದಲ್ಲಿ ಮಂಗಳೂರು ವಿವಿ ಮಟ್ಟದ ಸಾಂಸ್ಕೃತಿಕ ವೈಭವ ತುಳುನಾಡ ಸಿರಿ ‘ಮದಿಪು’-2025ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಥಿ೯ಗಳು ಭೂತದ ಕೋಲ ಸಹಿತ ತುಳು ನಾಡಿನ ಜಾನಪದ ಕಲೆಗಳ ಬಗ್ಗೆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿದರೆ ಸಾಲದು ಬದಲಾಗಿ ತುಳುನಾಡಿನ ತಿಂಡಿತಿನಿಸುಗಳು, ಬಟ್ಟೆ ಬರೆಗಳು, ವಿವಿಧ ಜನಾಂಗಗಳಲ್ಲಿ ನಡೆಯುವ ಆಚರಣೆಗಳ ಬಗ್ಗೆ ಅಧ್ಯಯನ ಮಾಡಿದರೆ ಅದನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಹಕಾರಿಯಾಗುತ್ತದೆ ಮತ್ತು ಶಾಲಾ ಕಾಲೇಜುಗಳಲ್ಲಿ ತುಳುವಿನ ಬಗ್ಗೆ ಕಾಯ೯ಕ್ರಮಗಳನ್ನು ಆಯೋಜಿಸುವುದರಿಂದ ಅರಿಯಲು ಸಾಧ್ಯ ಎಂದ ಅವರು ತುಳುನಾಡಿನಲ್ಲಿರುವ ಕ್ರಿಶ್ಚಿಯನ್ನರು, ಮುಸ್ಲಿಂರು, ಜೈ ನರು ಎಲ್ಲರೂ ತಮ್ಮ ಮನೆಯಿಂದ ಹೊರಗೆ ಬಂದು ತುಳು ಭಾಷೆಯನ್ನು ವ್ಯವಹಾರಿಕವಾಗಿ ಬಳಸಿಕೊಳ್ಳುವುದರಿಂದಲೇ ಸೌಹಾದ೯ತೆ ಬೆಳೆಯಲು ಸಾಧ್ಯವಾಗಿದೆ ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶುಭ ಹಾರೈಸಿದರು.
ಸನ್ಮಾನ: ಕಾಲೇಜಿನ ಹಳೆ ವಿದ್ಯಾರ್ಥಿ, ಛಾಯಾಗ್ರಾಹಕ ಎಂ. ರಾಮ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿತ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಸದಸ್ಯರಾದ ಸಿ.ಹೆಚ್ ಗಫೂರ್, ಹಳೆ ವಿದ್ಯಾಥಿ೯ ಸಂಘದ ಅಧ್ಯಕ್ಷ ನಾಗರಾಜ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮಪಾಲನ ಸಂಘದ ನಾಯಕಿ ಶೃತಿ ಎಸ್. ಪೇರಿ, ಮುಖ್ಯ ಕಾಯ೯ಕ್ರಮ ಸಂಯೋಜಕರಾದ ವಿಜಯಲಕ್ಷ್ಮೀ, ಕಾಯ೯ಕ್ರಮ ಸಂಯೋಜಕರಾದ ರಶ್ಮಿತಾ, ಶಾರದಾ, ಸಂದೀಪ್, ವಿದ್ಯಾರ್ಥಿ ಸಂಯೋಜಕರಾರ ರೋಹಿಸ್ಟಾನ್ ಪಿಂಟೋ, ಕಾತಿ೯ಕ್ ಶೆಟ್ಟಿ, ಸಚಿನ್, ಪ್ರಜ್ವಲ್ ರಾವ್, ಕಿರಣ್, ತುಳು ಸಂಘದ ಕಾಯ೯ದಶಿ೯ ದೀಪಶ್ರೀ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಕಾಪಿಕಾಡ್ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ರಮ್ಯಾ ಕಾಯ೯ಕ್ರಮ ನಿರೂಪಿಸಿದರು. ಕಾಯ೯ಕ್ರಮದ ಮುಖ್ಯ ಸಂಯೋಜಕಿ ಪೂಣಿ೯ಮಾ ವಂದಿಸಿದರು.
ನಂತರ ವಿವಿ ಮಟ್ಟದ ವಿದ್ಯಾಥಿ೯ಗಳಿಂದ ವಿವಿಧ ವಿಭಾಗದ ಸ್ಪಧೆ೯ಗಳು ನಡೆದವು.