ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಪೊಲೀಸ್ ಇಲಾಖೆ: ಧನ್ಯವಾದ ಸಲ್ಲಿಸಿದ ಹಿಂಜಾವ

ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಪೊಲೀಸ್ ಇಲಾಖೆ: ಧನ್ಯವಾದ ಸಲ್ಲಿಸಿದ ಹಿಂಜಾವ

ಮೂಡುಬಿದಿರೆ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಕಳ್ಳತನ, ಬಡ ರಿಕ್ಷಾ ಚಾಲಕರನ್ನು ಮತ್ತು ವಾಹನ ಸವಾರರನ್ನು ಪರಿಶೀಲನೆ ಮಾಡುವ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಎಸ್ ಐಗಳ ವಿರುದ್ಧ ಕ್ರಮಕೈಗೊಳ್ಳುವ, ದನಗಳ್ಳತನದ ಆರೋಪಿಗಳನ್ನು ಬಂಧಿಸುವ ಹಾಗೂ ಅಮಾಯಕ ಯುವಕನೋವ೯ನ ಕೊಲೆಗೆ ಯತ್ನಿಸಿರುವ ಆರೋಪಿಗಳನ್ನು ಬಂಧಿಸುವ ಬಗ್ಗೆ ಭರವಸೆ ನೀಡಿರುವ ಎಸಿಪಿ ಶ್ರೀಕಾಂತ್ ಹಾಗೂ ಮೂಡುಬಿದಿರೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ ಮತ್ತು ಅವರ ತಂಡಕ್ಕೆ ಹಿಂಜಾವೇ ಕೃತಜ್ಞತೆ ಸಲ್ಲಿಸಿದೆ.

ಅಕ್ರಮ ಗೋ ಕಳ್ಳತನ, ಅಮಾಯಕನ ಕೊಲೆಗೆ ಯತ್ನ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು ಹಾಗೂ ವಾಹನಗಳನ್ನು ನಿಲ್ಲಿಸಿ ಸಾವ೯ಜನಿಕರಿಂದ ಸುಲಿಗೆ ಮಾಡುತ್ತಿರುವ ಎಸ್ ಐ ನವೀನ್ ಮತ್ತು ಕೃಷ್ಣಪ್ಪ ಅವರ  ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ  ಶುಕ್ರವಾರದಿಂದ ಪೊಲೀಸ್ ಠಾಣೆಯ ಮುಂಭಾಗ ಆಹೋರಾತ್ರಿ ಧರಣಿ ಮಾಡುವುದಾಗಿ ಹಿಂಜಾವೇ ಎಚ್ಚರಿಕೆ ನೀಡಿತ್ತು.

ಇದೀಗ ಒಂದೇ ದಿನದಲ್ಲಿ ಪೊಲೀಸರು ಬೇಡಿಕೆಯನ್ನು ಈಡೇರಿಸಿರುವುದರಿಂದ ಹಿಂಜಾವೇ ಕೃತಜ್ಞತೆ ಸಲ್ಲಿಸಿ ಧರಣಿ ನಡೆಸುವ ನಿಧಾ೯ರವನ್ನು ಕೈ ಬಿಟ್ಟಿರುವುದಾಗಿ ಹಿಂಜಾವೇಯ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮೂಡುಬಿದಿರೆ ಪರಿಸರದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು.

ಅಕ್ರಮ ಕಸಾಯಿಖಾನೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಪೋಲಿಸ್ ಇಲಾಖೆ ವಿಫಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ಪರಿವಾರ ಸಂಘಟನೆಗಳ ಜೊತೆ ಸೇರಿ ಉಗ್ರ ಹೋರಾಟ ನಡೆಸುವುದಾಗಿಯೂ ಹಿಂಜಾವೇ ಎಚ್ಚರಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article