ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಬಿಜಾಥಾನ್-2025’: ಯುವ ಉದ್ಯಮಿಗಳ ಪ್ರತಿಭೆಗೆ ವೇದಿಕೆ

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಬಿಜಾಥಾನ್-2025’: ಯುವ ಉದ್ಯಮಿಗಳ ಪ್ರತಿಭೆಗೆ ವೇದಿಕೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗವು ಬಿಜಾಥಾನ್ 2025 ಎಂಬ ವಿಶಿಷ್ಟ ವಿದ್ಯಾರ್ಥಿ ಮೇಳವನ್ನು ಯಶಸ್ವಿಯಾಗಿ ಆಯೋಜಿಸಿತು. ಕಾಲೇಜಿನ ಬಿಬಿಎ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ನಡೆಸಲಾದ ಈ ಉತ್ಸವವು ವಿದ್ಯಾರ್ಥಿಗಳಲ್ಲಿ ತಾಳ್ಮೆ, ವಿಶ್ಲೇಷಣಾ ಶಕ್ತಿ ಮತ್ತು ತಂತ್ರಮತಿಯನ್ನು ಅಳವಡಿಸಿಕೊಂಡು ಹೊಸ ವಿಷಯಗಳನ್ನು ಅನುಭವದ ಮೂಲಕ ಕಲಿಯುವಂತಾಗಿಸಿತು.

ಈ ಮೇಳವು ಬಿಸಿನೆಸ್ ಡಿಬೇಟ್, ಕೋರ್ಪೊರೇಟ್ ರೋಲ್ ಪ್ಲೇ, ಟ್ರೆಜರ್ ಹಂಟ್, ಬಿಸಿನೆಸ್ ಕ್ವಿಜ್, ಮ್ಯಾಡ್ ಅಡ್ಸ್ ಮುಂತಾದ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಒಳಗೊಂಡಿತ್ತು. ವಿಶೇಷವಾಗಿ ಗಮನ ಸೆಳೆದ ಕಾರ್ಯಕ್ರಮವಾದ ಬಿಜಾಥಾನ್ನಲ್ಲಿ ವಿದ್ಯಾರ್ಥಿಗಳಿಗೆ ನೈಜ ಬಿಸಿನೆಸ್ ಸಮಸ್ಯೆಯೊಂದನ್ನು ನೀಡಲಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ವಿದ್ಯಾರ್ಥಿಗಳಿಗೆ ನಾಲ್ಕು ಗಂಟೆಗಳ ಕಾಲ ನೀಡಲಾಯಿತು. ತಂಡವಾಗಿ ಕೆಲಸ ಮಾಡಿದ ಅವರು ವಿಭಿನ್ನ ಆಲೋಚನೆಗಳೊಂದಿಗೆ ಸಮರ್ಥ ಪರಿಹಾರಗಳನ್ನು ನೀಡಿದರು. ಈ ಚಟುವಟಿಕೆ ವಿದ್ಯಾರ್ಥಿಗಳ ಚಿಂತನ ಶಕ್ತಿ ಮತ್ತು ತಂಡಾತ್ಮಕ ಕಾರ್ಯವೈಖರಿಯನ್ನು ಉತ್ತೇಜಿಸಿತು.

ಕಾಲೇಜಿನ ಪ್ರಾಚಾರ್ಯರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರವರು ಈ ರೀತಿಯ ‘ಮೈಂಡ್ ವರ್ಕ್’ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ನೀಡುತ್ತಿರುವ ವಿಭಾಗದ ಶ್ಲಾಘನೀಯ ಕೆಲಸವನ್ನು ಪ್ರಶಂಸೆ ಮಾಡಿದ ಅವರು ‘ಹ್ಯಾಕಥಾನ್‌ಗಳು ಕೇವಲ ಸ್ಪರ್ಧೆಗಳಲ್ಲ ಅವುಗಳು ಕಲ್ಪನೆಗಳನ್ನು ಸಾಕಾರಗೊಳಿಸುವ ವೇದಿಕೆಗಳಾಗಿವೆ. ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಲು, ಅಸ್ಪಷ್ಟತೆಯನ್ನು ಸ್ಪಷ್ಟತೆಯಾಗಿ ಪರಿವರ್ತಿಸಲು ಮತ್ತು ಸಮಸ್ಯೆಗಳನ್ನು ಅವಕಾಶಗಳಾಗಿ   ಪರಿವರ್ತಿಸಲು ಈ ರೀತಿಯ ಸ್ಪರ್ಧೆಗಳು ನಮಗೆ ಕಲಿಸುತ್ತವೆ.ಈ ಸ್ಪರ್ಧೆಗಳ ಮುಖಾಂತರ ಒಂದು ಬ್ಯುಸಿನೆಸ್ ಸಮಸ್ಯೆಗೆ ಹಲವು ಪರೊಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಮುಂದೊಂದು ದಿನ ನೀವು ಕಂಡುಕೊಂಡ ಪರಿಹಾರವು ಹೊಸದೊಂದು ಕೈಗಾರಿಕೆಗೆ ಕಾರಣವಾಗಬಹುದು. ಈ ಮೂಲಕ ವಿದ್ಯಾರ್ಥಿಗಳಲ್ಲಿ ತಂಡವಾಗಿ ಭಾಗವಹಿಸುವಿಕೆ, ಒತ್ತಡ ನಿರ್ವಹಣೆ, ಸಮಯದ ಸಮರ್ಪಕ ಬಳಕೆ ನೈಜ ಸವಾಲುಗಳಿಗೆ ಮೂಲ ಪರಿಹಾರಗಳನ್ನು ಕಲ್ಪಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬಿಬಿಎ ಇನ್ ಬಿಸಿನೆಸ್ ಅನಾಲಿಟಿಕ್ಸ್ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತಿದೆ.

ಉದ್ಯಮ ಕ್ಷೇತ್ರದ ಬೇಡಿಕೆಗಳಿಗನಗುಣವಾಗಿ ಸಂಯೋಜನೆಗೊಂಡ ಈ ಕಾರ್ಯಕ್ರಮವು ಉದ್ಯಮಕ್ಷೇತ್ರ ಹಾಗೂ ಪದವಿಶಿಕ್ಷಣಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ನಿಸ್ಸಂಶಯ. ಅತ್ಯಾಧುನಿಕ ವಿಶ್ಲೇಷಣೆಗಳೊಂದಿಗೆ ಪ್ರಮುಖ ವ್ಯವಹಾರ ತತ್ವಗಳನ್ನು ಅಳವಡಿಸಿಕೊಂಡು, ಡೇಟಾ ದೃಶ್ಯೀಕರಣ, ಯಂತ್ರ ಕಲಿಕೆ, ಸಂಖ್ಯಾಶಾಸ್ತ್ರೀಯ ಮಾಡೆಲಿಂಗ್ ಮತ್ತು ಉದ್ಯಮದ ನಾಯಕರೊಂದಿಗೆ ಪಾಲುದಾರಿಕೆಗಳು ಇಂಟರ್ನ್ಶಿಪ್ಗಳು, ಲೈವ್ ಪ್ರಾಜೆಕ್ಟ್‌ಗಳು ಮತ್ತು ಕಾರ್ಯಾಗಾರಗಳನ್ನು ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರಿಣತಿ ನೀಡುತ್ತದೆ. ಡೇಟಾ ಹಾಗೂ ಅನವೀಯತೆಯ ‘ಬಿಜಾಥಾನ್ 2025’ನ ಉದ್ಘಾಟನಾ ಕಾರ್ಯಕ್ರಮವು ಪ್ರಥಮ ಬಿಬಿಎ ವಿದ್ಯಾರ್ಥಿನ ಪ್ರಿಯಾ ಕೆ. ಸ್ವಾಗತಿಸಿ, ಪ್ರಥಮ ಬಿಬಿಎ ವಿದ್ಯಾರ್ಥಿ ಲಿಖಿತ ವಂದಿಸಿದರು. ಅನಘ ಕಾರ್ಯಕ್ರಮ ನಿರೂಪಿಸಿದರು. 

ವಿಭಾಗದ ಮುಖ್ಯಸ್ಥರೂ ಕಾರ್ಯಕ್ರಮದ ಸಂಯೋಜಕರೂ ಆದ ಡಾ. ರಾಧಾಕೃಷ್ಣ ಗೌಡ ಅವರು ಕಾರ್ಯಕ್ರಮದ ಸಂಕ್ಷಿಪ್ತ ವಿವರಣೆ ನೀಡಿದರು. ಅವರು ವಿದ್ಯಾರ್ಥಿಗಳ ಉತ್ಸಾಹ ಮತ್ತು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶ್ರದ್ಧೆಯನ್ನು ಅಭಿನಂದಿಸಿದರು. ಮ್ಯಾನೇಜ್ಮೆಂಟ್ ಅಸೋಸಿಯೇಶನ್ನ ಅಧ್ಯಕ್ಷೆಯಾದ ಪುಷ್ಪಾ ಎನ್. ಅವರು  ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದರು. ಕಾಲೇಜಿನ ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಪ್ರಶಾಂತ್ ರೈ ಹಾಗೂ ಪರೀಕ್ಷಾಂಗ ಉಪಕುಲಸಚಿವ ಅಭಿಷೇಕ್ ಸುವರ್ಣ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 

ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article