
ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಏಕಲವ್ಯ’ ಅತಿಥಿ ಉಪನ್ಯಾಸ
Monday, April 28, 2025
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ, ಹಿಂದಿ ವಿಭಾಗವು ‘ಆದಿವಾಸಿ ಯೋಧ ಸರ್ವಶ್ರೇಷ್ಠ್ ಧನುರ್ಧಾರಿ ಏಕಲವ್ಯ’ ಎಂಬ ಅತಿಥಿ ಉಪನ್ಯಾಸವನ್ನು ಕಾಲೇಜಿನ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಏಪ್ರಿಲ್ ೨೬ರಂದು ನಡೆಸಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಹೀರಾ ಮಹಿಳಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಹರ್ಷ ಕೆ.ಪಿ. ಭಾಗವಹಿಸಿ ಮಾತನಾಡಿ, ನಮ್ಮಲ್ಲಿರುವ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು, ಜ್ಞಾನವನ್ನು ಎಲ್ಲರಿಗೂ ಹಂಚುವ ಸತ್ಕಾರ್ಯದಿಂದ, ಯಶಸ್ಸು ಲಭಿಸುತ್ತದೆ. ನಮ್ಮೊಳಗಿನ ಜ್ಞಾನದ ದೀವಿಗೆಯು ಸದಾ ಪ್ರಜ್ವಲಿಸಿ ನಮ್ಮ ಜೀವನವನ್ನು ಬೆಳಗಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟೋನಿ ಪ್ರಕಾಶ್ ಮೊಂತೆರೋ ವಹಿಸಿ ಮಾತನಾಡಿ, ನಿಮ್ಮೊಳಗಿನ ಏಕಲವ್ಯನ ಚೈತನ್ಯವನ್ನು ಜಾಗೃತಗೊಳಿಸಬೇಕೆಂದರು. ನಮ್ಮಲ್ಲಿರುವ ಜ್ಞಾನದ ಬಗ್ಗೆ ಅಹಂಕಾರವಿರದೆ, ಗೌರವವಿರಬೇಕು. ಆತ್ಮವಿಶ್ವಾಸದೊಂದಿಗೆ ಗುರುಗಳನ್ನು ಗೌರವಿಸಬೇಕೆಂದರು.
ಪ್ರಾಂಶುಪಾಲರು ಹಿಂದಿ ವಿಭಾಗವು ಆಯೋಜಿಸಿದ ‘ದಿ ಲಾಸ್ಟ್ ಬೆಲ್’ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಹಿಂದಿ ವಿಭಾಗ ಮುಖ್ಯಸ್ಥ ಡಾ. ಡಿಂಪಲ್ ಜೆನ್ನಿಫರ್ ಫೆರ್ನಾಂಡಿಸ್ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಿಂಪಲ್ ಟೌರೋ ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಥಮ ಬಿಸಿಎ ವಿದ್ಯಾರ್ಥಿನಿ ಮಧುರಾ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಯೋಜಕಿ ಸಬಾ ಅಷ್ಫಿಯ ಸ್ವಾಗತಿಸಿ, ದ್ವಿತೀಯ ಬಿಸಿಎಯ ಆಶ್ಲೇಷ್ ವಂದಿಸಿದರು. ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು.