
ಬ್ರಹ್ಮರಕೊಟ್ಲು ರಸ್ತೆಗೆ ಬಿದ್ದ ಮರ
Wednesday, May 21, 2025
ಬಂಟ್ವಾಳ: ಮಂಗಳವಾರ ಮುಂಜಾನೆಯಿಂದ ಸುರಿದ ಧಾರಾಕಾರ ಮಳೆಗೆ ರಾ.ಹೆ. ಬ್ರಹ್ಮರಕೋಟ್ಲುವಿನ ಸರ್ವೀಸ್ ರಸ್ತೆಗೆ ಮರ ಬಿದ್ದ ಘಟನೆ ಸಂಜೆ ನಡೆದಿದ್ದು, ಯಾವುದೇ ಹಾನಿಯಾಗಿಲ್ಲ.
ಟೋಲ್ ತಪ್ಪಿಸುವ ನಿಟ್ಟಿನಲ್ಲಿ ಹೆಚ್ಚಾಗಿ ಕೆಲ ವಾಹನಗಳು ಇದೇ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತವೆ. ಮರ ಮುರಿದು ಬೀಳುವ ಸಂದರ್ಭದಲ್ಲಿ ಯಾವುದೇ ವಾಹನಗಳು ಸಂಚರಿಸದರಿಂದ ಅಪಾಯ ಸಂಭವಿಸಿಲ್ಲ
ವಿದ್ಯುತ್ ಕಂಬಕ್ಕೆ ಬಿದ್ದ ಮರ:
ಅದೇರೀತಿ ಬಂಟ್ವಾಳ ತಾಲೂಕಿನ ಕುಕ್ಕಾಜೆ ಕಾಪಿಕಾಡು ಎಂಬಲ್ಲಿ ಮರವೊಂದು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾದ ಘಟನೆ ನಡೆದಿದೆ. ಘಟನೆಯಿಂದಾಗಿ ಎಷ್ಟು ಕಂಬಗಳಿಗೆ ಹಾನಿಯಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ, ವಿದ್ಯುತ್ ಕಂಬಗಳ ಜೊತೆಯಲ್ಲಿ ತಂತಿಗಳು ಕಡಿದು ಬಿದ್ದಿದ್ದು ಸಾವಿರಾರು ರೂ. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ಸ್ಥಳೀಯರು ಸಹಕಾರದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವು ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರಲ್ಲದೆ ಕಡಿದುಬಿದ್ದ ತಂತಿ, ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾರ್ಯ ನಡೆಸಿದ್ದಾರೆ.