
ಕಾಂಗ್ರೆಸ್ ಸರ್ಕಾರ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಲು ಬಿಡುವುದಿಲ್ಲ: ವಾಗ್ಮಿ ಶ್ರೀಕಾಂತ್ ಶೆಟ್ಟಿ
ಕುಪ್ಪೆಪದವು: ಟೇಬಲ್ ಗುದ್ದಿ ಸುಹಾಸ್ ಶೆಟ್ಟಿ ಮನೆಗೆ ಹೋಗಬಾರದು ಎಂದು ಗ್ರಹ ಸಚಿವರಿಗೆ ಹಾಕಿದ ಧಮ್ಕಿಗೆ ಹೆದರಿ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕ ಸುಹಾಸ್ ಮನೆಗೆ ಹೋಗಿಲ್ಲ ಇಂತಹ ಸರಕಾರ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಲು ಬಿಡುವುದಿಲ್ಲ. ಇಡೀ ಕಾಂಗ್ರೇಸ್ ಪಕ್ಷ ಬೆನ್ನು ಮೂಳೆ ಇಲ್ಲದೇ ಮತಾಂಧರರ ಮುಂದೆ ಮಂಡಿಯೂರಿದೆ ಎಂದು ವಾಗ್ಮಿ ಶ್ರೀಕಾಂತ್ ಶೆಟ್ಟಿ ಹೇಳಿದರು.
ಅವರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ನೀಡಬೇಕು ಎಂದು ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಭಾನುವಾರ ಹಮ್ಮಿಕೊಂಡಿದ್ದ ‘ಬಜಪೆ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಳೆಯಿಂದ ಬಜಪೆಯ ಮಣ್ಣಿನಿಂದ ಸುಹಾಸ್ ಶೆಟ್ಟಿಯ ರಕ್ತದ ಕಲೆಗಳನ್ನು ಅಳಿಸಲು ಮಾತ್ರ ಸಾಧ್ಯ ನಮ್ಮ ಎದೆಯಲ್ಲಿ ಉರಿಯುವ ಸೇಡಿನ ಬೆಂಕಿಯನ್ನು ಆರಿಸಲು ಸಾಧ್ಯವಿಲ್ಲ. ಸುಹಾಸ್ ಶೆಟ್ಟಿ ಬಲಿದಾನಕ್ಕೆ ಉತ್ತರವನ್ನು ಎಲ್ಲಿ? ಹೇಗೆ? ಮತ್ತು ಅದು ನಿಮ್ಮದೇ ರೀತಿಯ ಭಾಷೆಯಲ್ಲಿ ಕೊಡಬೇಕು ಎಂಬುದನ್ನು ಹಿಂದೂ ಸಮಾಜ ತೀರ್ಮಾನ ಮಾಡುತ್ತದೆ.ಕೇಂದ್ರ ತನಿಖಾ ತಂಡದಿಂದ ತನಿಖೆಯಾದರೆ ಕೊಲೆಯ ಹಿಂದಿನ ಕಾಣದ ಕೈಗಳು ಯಾರು ಎಂದು ಗೊತ್ತಾಗಬಹುದು. ಯಾರನ್ನೂ ಲೂಟಿ ಮಾಡದ, ದರೋಡೆ ಮಾಡದ ಕೊಟ್ಟಿಗೆಗೆ ನುಗ್ಗಿ ಹಸುಗಳನ್ನು ಕಳವು ಮಾಡದ ಹೆಣ್ಮಕ್ಕಳನ್ನು ಅಪಹರಿಸಿ ಹತ್ಯೆ ಮಾಡದ ಕೇವಲ ಹಿಂದೂ ಸಮಾಜದ ಪರ ಪ್ರಚಾರ ಮಾಡಿದ ಹಿಂದೂ ಯುವಕರಿಗೆ ರೌಡಿ ಶೀಟರ್ ಪಟ್ಟ ಕಟ್ಟಲಾಗುತ್ತದೆ. ಕರಾವಳಿ ಹಿಂದೂತ್ವದ ಪ್ರಯೋಗ ಶಾಲೆ ಎನ್ನುತ್ತಾರೆ. ಒಂದು ವೇಳೆ ಕರಾವಳಿ ಹಿಂದುತ್ವದ ಪ್ರಯೋಗ ಶಾಲೆಯಾಗದಿರುತ್ತಿದ್ದರೆ, ಬಾಂಬ್ ತಯಾರಿಸುವ, ಉಗ್ರವಾದಿಗಳ ಪ್ರಯೋಗ ಶಾಲೆಯಾಗುತ್ತಿತ್ತು. ಮತಾಂಧ ಶಕ್ತಿಗಳಿಗೆ ಹೆದರಿ ಕುಳಿತುಕೊಳ್ಳದೇ ತಕ್ಕ ಉತ್ತರ ಕೊಡುವ ಶಕ್ತಿ ಹಿಂದೂ ಸಮಾಜಕ್ಕೆ ಇದೆ. ನಿಮ್ಮ ಸಮಾಜಕ್ಕೆ ಎಷ್ಟು ರಕ್ತ ದಾಹವಿದೆ ಅದನ್ನು ತೀರಿಸಿ ಅದಕ್ಕಿಂತ ಒಂದು ತೊಟ್ಟು ಹೆಚ್ಚಾದರೂ ರಕ್ತವನ್ನು ಉಳಿಸಿಕೊಳ್ಳುವ ಶಕ್ತಿ ಹಿಂದೂ ಸಮಾಜಕ್ಕೆ ಇದೆ ಎಂದರು.
ಮೂಲ್ಕಿ-ಮೂಡಬಿದ್ರಿ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಸುಹಾಸ್ ಶೆಟ್ಟಿ ಕೊಲೆಯಲ್ಲಿ ಪೊಲೀಸ್ ಇಲಾಖೆ ನೇರವಾಗಿ ಶಾಮೀಲಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿ ಹಾಗೂ ಓರ್ವ ರಾಜಕಾರಣಿ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದು,ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಿದಲ್ಲಿ ಇವರೆಲ್ಲರ ಹೆಸರು ಬಹಿರಂಗವಾಗುತ್ತದೆ ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಮುಖಂಡರುಗಳಾದ ಶಿವಾನಂದ ಮೆಂಡನ್, ಶರಣ್ ಪಂಪ್ವೆಲ್, ಜಗದೀಶ್ ಶೇಣವ, ಭುಜಂಗ ಕುಲಾಲ್, ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕರುಗಳಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಭಾಗೀರತಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ವಿಶ್ವಹಿಂದೂ ಪರಿಷತ್ ಭಜರಂಗದಳದ ಮುಖಂಡರುಗಳು ಪಾಲ್ಗೊಂಡಿದ್ದರು.
ಗುರುಪ್ರಸಾದ್ ಉಳ್ಳಾಲ ಸಭೆಯನ್ನು ನಿರ್ವಹಿಸಿದರು.
ಧಾರಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಹಿಂದೂ ಕಾರ್ಯಕರ್ತರ ದಂಡು ಬಜಪೆ ಪೇಟೆಯತ್ತ ಹರಿದು ಬಂದಿತ್ತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಸರಕಾರಕ್ಕೆ ಧಿಕ್ಕಾರ ಕೂಗಿ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಘೋಷಣೆಗಳನ್ನು ಕೂಗಿದರು.
ಸುಹಾಸ್ ಶೆಟ್ಟಿ ಭಾವ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಮುಂಜಾಗ್ರತಾ ಕೃಮವಾಗಿ ಬಜಪೆ ಪೇಟೆಯ ಅಂಗಡಿಮುಂಗಟ್ಟುಗಳನ್ನು ಮುಚ್ಚಳಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.