ವಿದ್ಯಾರ್ಥಿನಿಯಿಂದ "dikkaraoperationsindura" ದೇಶ ವಿರೋಧಿ ಇನ್ಸ್ಟಾಗ್ರಾಂ ಪೋಸ್ಟ್..!

ವಿದ್ಯಾರ್ಥಿನಿಯಿಂದ "dikkaraoperationsindura" ದೇಶ ವಿರೋಧಿ ಇನ್ಸ್ಟಾಗ್ರಾಂ ಪೋಸ್ಟ್..!


ಮಂಗಳೂರು: ವಿದ್ಯಾರ್ಥಿನಿಯೊಬ್ಬಳು ಇನ್‌ಸ್ಟಾಗ್ರಾಂ‌ನಲ್ಲಿ "dikkaraoperationsindura" ಎಂದು ದೇಶ ವಿರೋಧಿ ಪೋಸ್ಟ್ ಹಾಕಿರುವುದು ಭಾರೀ ವಿವಾದ ಸೃಷ್ಟಿಸಿದೆ. 

ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಪೋಸ್ಟ್ ಹಾಕಿರುವವಳು. ಈಕೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿ ವಿದ್ಯಾರ್ಥಿನಿ.


'ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕು'

'ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ... ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದ ಕತ್ತಲು... ಎಲ್ಲೆಲ್ಲೂ ಕತ್ತಲು...!'


#dikkaraoperationsindura ಹ್ಯಾಷ್‌ಟ್ಯಾಗ್ ನಡಿ ಪೋಸ್ಟ್ ಹಾಕಿಕೊಂಡಿದ್ದಳು. ಈ ಪೋಸ್ಟ್ ವಿವಾದವಾಗುತ್ತಿದ್ದಂತೆ ಆಕೆ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾಳೆ.

ಪೋಸ್ಟ್ ವೈರಲ್ ಆಗಿ ವಿವಾದವಾ್ ಬೆನ್ನಲ್ಲೇ  ರೇಷ್ಮಾ ಮತ್ತೆ ಸಮರ್ಥನೆ ಮಾಡಿಕೊಂಡು ಮೇ 8ರಂದು ಮತ್ತೆ ಪೋಸ್ಟ್ ಹಂಚಿಕೊಂಡಿದ್ದಾಳೆ. ಈ ಪೋಸ್ಟ್‌ನಲ್ಲಿ 'ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ ನನಗಿದೆ'


'ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ'

'ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ, ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ'

'ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ'


'ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ'

'ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ'


'ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ' ಎಂದು ಬರೆದುಕೊಂಡಿದ್ದಾಳೆ.


ಸದ್ಯ ಆಕೆಯ ಇನ್‌ಸ್ಟಾಗ್ರಾಂ ಅಕೌಂಟ್ ಎಲ್ಲವನ್ನೂ ರಿಪೋರ್ಟ್ ಮಾಡುವಂತೆ ಕಾಮೆಂಟ್ ಬಂದಿದೆ‌. ಅಲ್ಲದೆ ಆಕೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯ ಕೇಳಿ ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article