ಉಗ್ರರ ಧ್ವಂಸ, ಸೇನಾ ಕಾರ್ಯಾಚರಣೆಗೆ ಸಲ್ಯೂಟ್‌: ಮಂಜುನಾಥ ಭಂಡಾರಿ

ಉಗ್ರರ ಧ್ವಂಸ, ಸೇನಾ ಕಾರ್ಯಾಚರಣೆಗೆ ಸಲ್ಯೂಟ್‌: ಮಂಜುನಾಥ ಭಂಡಾರಿ


ಮಂಗಳೂರು: ಪಾಕಿಸ್ತಾನದ ಉಗ್ರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆಸಿದ್ದ ಹತ್ಯಾಕಾಂಡಕ್ಕೆ ಪತ್ಯುತ್ತರವಾಗಿ ಭಾರತದ ಹೆಮ್ಮೆಯ ಸೇನೆ ತಕ್ಕ ಪಾಠವನ್ನೇ ಕಲಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಪರೇಷನ್‌ ಸಿಂಧೂರದ ಮೂಲಕ ಪಾಕ್‌ನಲ್ಲಿರುವ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ, ಉಗ್ರರನ್ನು ಧ್ವಂಸ ಮಾಡುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿದೆ. 

ನಮ್ಮ ಭಾರತೀಯ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ ಉಗ್ರರಿಗೆ ತಕ್ಕ ಬುದ್ಧಿ ಕಲಿಸಿದ ಭಾರತೀಯ ಸೇನೆಯ ಕಾರ್ಯಕ್ಕೆ ನಮ್ಮದೊಂದು ದೊಡ್ಡ ಸೆಲ್ಯೂಟ್‌. ಅಲ್ಲದೇ ಭಾರತೀಯರ ಮೇಲೆ ಮತ್ತು ಭಾರತೀಯ ಸಂಸ್ಕೃತಿಯ ಮೇಲೆ ಯಾರೇ ದಾಳಿ ಮಾಡಿದರೂ ಇಂಥ ಸ್ಥಿತಿ ಬರಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ನಮ್ಮ ಯೋಧರು ತೋರಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article