
'ಅಪರೇಷನ್ ಸಿಂದೂರ'ಕ್ಕೆ ನಿವೃತ್ತ ಯೋಧರ ಪ್ರತಿಕ್ರಿಯೆ
ಕಾಶ್ಮೀರದ ಪೆಹಲ್ ಗಾಂವ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಹತ್ಯೆಗೆ ಪ್ರತಿಕಾರವಾಗಿ ನಡೆದ 'ಅಪರೇಷನ್ ಸಿಂದೂರ'ದ ಮೂಲಕ ತಿರಿಸಿಕೊಂಡ ಪ್ರತಿಕಾರಕ್ಕೆ ನಿವೃತ್ತ ಸೈನಿಕರು ಪ್ರತಿಕ್ರಿಯೆ ನೀಡಿದ್ದಾರೆ.
ವಿಷ್ಣುಮೂರ್ತಿ ನಾಯಕ್ ಮುಟ್ಟಿಕಲ್ಲು(ಬೆಳ್ಳೆ):
ಅತ್ಯಂತ ಉತ್ತಮ ನಿರ್ಣಯ, ಯುದ್ದ ಆದ್ರೆ ಅನೇಕ ಸಾವುನೋವುಗಳಾಗುತ್ತವೆ. ಪಾಕಿಸ್ತಾನಕ್ಕೆ ಭಯ ಹುಟ್ಟಿಸುವ ವಾತಾವಣ ನಿರ್ಮಾಣ ಆಗಬೇಕು. ಅಮಾಯಕರು ಬಲಿಯಾಗಬಾರದು. ಮೋದೀಜಿಯವರ ದಿಟ್ಟ, ಸೂಕ್ತ ನಿರ್ಧಾರ.
ಗೋಪಾಲ ಶೆಟ್ಟಿ ಬಂಟಕಲ್ಲು ಅರಸೀಕಟ್ಟೆ:
೮೫ರ ಹರೆಯದ ಪಾಕಿಸ್ಥಾನ ಚೀನಾ, ಬಾಂಗ್ಲಾ ಯುದ್ದದಲ್ಲಿ ಭಾಗವಹಿಸಿದ ಹಿರಿಯ ಯೋಧ, ಹಿಂದೆ ಶಸ್ತ್ರಾಸ್ತ್ರಗಳು ಕಡಿಮೆ ಇದ್ದು,ಸಾಕಷ್ಟು ಸೌಲಭ್ಯಗಳು ಇಲ್ಲದೆ ಚೈನಾವಾರ್ನಲ್ಲಿ ಸೋಲಬೇಕಾಯಿತು. ಮೋದೀಜಿ ಬಂದ ಮೇಲೆ ಸೈನಿಕರಿಗೆ ಮಾಜಿ ಯೋಧರಿಗೆ ತುಂಬಾ ಅನುಕೂಲವಾಗಿದೆ. ಈಗ ಎಲ್ಲಾ ಸುಸಜ್ಜಿತ ಶಸ್ತ್ರಾಸ್ತ್ರಗಳು, ವ್ಯವಸ್ಥೆಗಳಿದ್ದು, ಪಾಕಿಸ್ತಾನ ನಮಗೆ ಯಾವ ಲೆಕ್ಕವೂ ಅಲ್ಲ. ಕಾಶ್ಮೀರ ಘಟನೆಗೆ ಸೂಕ್ತ ಸಮಯದಲ್ಲಿ ಸರಿಯಾದ ಉತ್ತರ ನೀಡಿದ್ದು, ಅದು ಹಿಂದೆ ತಿರುಗಿ ನೋಡದಂತಾಗಿದೆ.
ಶಿರ್ವ: ಕಾಶ್ಮೀರದ ಪಹಲ್ಗಾಮ್ ಘಟನೆಯ ನಂತರ ೧೩ ದಿನ ಕಾದು, ಅಣಕು ರಕ್ಷಣಾ ಜಾಗೃತಿಗೆ ಕರೆಕೊಟ್ಟು ದೇಶದ ಸಮಸ್ತ ಪ್ರಜೆಗಳ ಗಮನ ದೇಶದ ಕಡೆಗೆ ಹರಿಯುವಂತೆ ಮಾಡಿ ಉಗ್ರರನ್ನು ಸದೆ ಬಡಿದು ರಾತೋರಾತ್ರಿ ದೀಪಾವಳಿ ಮಾಡಿದ್ದು ಅತ್ಯಂತ ಸೂಕ್ತ ತೀರ್ಮಾಣ.