
ಭಾರತೀಯ ಸೇನೆಗೆ ಶುಭ ಹಾರೈಸಿದ ಬ್ರಹ್ಮಕುಮಾರಿ ವಿಶ್ವೇಶ್ವರಿ
Thursday, May 8, 2025
ಮಂಗಳೂರು: ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಸೇನೆಯು, ಉಗ್ರರ ಮೇಲೆ ಹಾಗೂ ಅದನ್ನು ಬೆಂಬಲಿಸುವ ಪಾಕಿಸ್ತಾನ ರಾಷ್ಟ್ರದ ಮೇಲೆ ನಡೆಸಿದ ಅಪ್ರತಿಮ ಸಾಹಸದ ಕಾರ್ಯಾಚರಣೆ 'ಆಪರೇಷನ್ ಸಿಂಧೂರ'.
ಇದು ಭಾರತೀಯರಾದ ನಾವು ಅತ್ಯಂತ ಹೆಮ್ಮೆಪಡುವಂತಹ ಸಂಗತಿ. ಕಾಶ್ಮೀರದ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆಯ ಮನೋ ಬಲ, ಬಾಹುಬಲ, ಬುದ್ಧಿಬಲ ಸದಾ ವೃದ್ಧಿ ಆಗಲಿ, ಪರಮಾತ್ಮನ ಛತ್ರಚಾಯೆ ಸದಾಕಾಲಕ್ಕೂ ನಮ್ಮ ಭಾರತೀಯ ಸೇನೆಯನ್ನು ರಕ್ಷಣೆ ಮಾಡಲಿ ಎಂದು ಬ್ರಹ್ಮಕುಮಾರಿ ವಿಶ್ವೇಶ್ವರಿ ಅವರು ಪ್ರಕಟಣೆಯಲ್ಲಿ ಶುಭ ಹಾರೈಸಿದ್ದಾರೆ.