
ನೇತ್ರಾವತಿ ಸಂಚಾರಕ್ಕೆ ಮುಕ್ತ
Saturday, May 3, 2025
ಮಂಗಳೂರು: ತುರ್ತು ದುರಸ್ತಿಯ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ರಾ.ಹೆ.೬೬ರ ಉಳ್ಳಾಲ ನೇತ್ರಾವತಿ ಸೇತುವೆಯು ಇಂದು ಬೆಳಗ್ಗಿನಿಂದ ಸಂಚಾರಕ್ಕೆ ಮುಕ್ತಗೊಂಡ ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ ಈ ಹಳೆಯ ಸೇತುವೆಯನ್ನು ದುರಸ್ತಿಪಡಿಸುವ ಸಲುವಾಗಿ ಎ.1ರಿಂದ ಒಂದು ತಿಂಗಳ ಕಾಲ ಮುಚ್ಚಲ್ಪಟ್ಟಿತ್ತು. ಹಾಗಾಗಿ ವಾಹನಗಳ ಓಡಾಟಕ್ಕೆ ಹೊಸ ಸೇತುವಯ ಒಂದು ಬದಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ದಿನನಿತ್ಯ ಟ್ರಾಫಿಕ್ ಬ್ಲಾಕ್ ಆಗಿ ಸಾರ್ವಜನಿಕರು, ವಾಹನಿಗರು ಸಂಕಷ್ಟಕ್ಕೊಳಗಾಗುತ್ತಿದ್ದರು.
ಇದೀಗ ಒಂದು ತಿಂಗಳ ಬಳಿಕ ಇಂದು ಬೆಳಗ್ಗಿನಿಂದ ಎಂದಿನಂತೆ ಹಳೆಯ ಸೇತುವೆಯು ಸಂಚಾರಕ್ಕೆ ಮುಕ್ತಗೊಂಡಿವೆ.