ಸ್ಟೆಬಿನ್ ಶಿಬುಗೆ ‘ಇಂಡಿಯಾ ಬುಕ್ ಆಪ್ ರೆಕಾರ್ಡ್ಸ್’ ಗೌರವ

ಸ್ಟೆಬಿನ್ ಶಿಬುಗೆ ‘ಇಂಡಿಯಾ ಬುಕ್ ಆಪ್ ರೆಕಾರ್ಡ್ಸ್’ ಗೌರವ


ಮಂಗಳೂರು: ನಗರದ ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ನಲ್ಲಿ ಎಂಎಸ್ಸಿ ಗಣಿತಶಾಸ್ತ್ರದ (2023-25 ಬ್ಯಾಚ್) ಸ್ನಾತಕೋತ್ತರ ವಿದ್ಯಾರ್ಥಿ ಸ್ಟೆಬಿನ್ ಶಿಬು, ತನ್ನ ಸ್ನಾತಕೋತ್ತರ ಸಂಶೋಧನೆಗಾಗಿ ‘ಇಂಡಿಯಾ ಬುಕ್ ಆಫ್ ರೆಕಾಡ್ಸ್ 2025ರ ಐಬಿಆರ್ ಅಚೀವರ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

‘ಮೈಕೆಲಿಸ್-ಮೆಂಟೆನ್ ಕೈನೆಟಿಕ್ಸ್ನ ಏಕೀಕರಣ ಮತ್ತು ಪಾಂಟ್ರಿಯಾಜಿನ್‌ನ ಗರಿಷ್ಟ ತತ್ವವನ್ನು ಅತ್ತುತ್ತಮ ಕಿಮೋಥೆರಪಿ ವೇಳಾಪಟ್ಟಿಗಾಗಿ ಸಂಯೋಜಿಸುವುದು’ ಎಂಬ ಶೀರ್ಷಿಕೆಯ ಸ್ನಾತಕೋತ್ತರ ಸಂಶೋಧನೆಗಾಗಿ ಈ ಪ್ರಶಸ್ತಿ ಸ್ಟೆಬಿನ್ ಶಿಬು ಅವರಿಗೆ ನೀಡಲಾಗಿದೆ. ಅವರ ಕೆಲಸವನ್ನು ಭಾರತದಲ್ಲಿ ಗಣಿತ ಆಂಕೊಲಾಜಿಯ ಉದಯೋನ್ಮುಖ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ಎಂದು ಗುರುತಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article