ಮಂಗಳೂರಿನಲ್ಲಿ ಉತ್ತಮ ಗಾಳಿ, ಮಳೆ: ತಗ್ಗು ಪ್ರದೇಶಗಳು ಜಲಾವೃತ

ಮಂಗಳೂರಿನಲ್ಲಿ ಉತ್ತಮ ಗಾಳಿ, ಮಳೆ: ತಗ್ಗು ಪ್ರದೇಶಗಳು ಜಲಾವೃತ


ಮಂಗಳೂರು: ನಗರದಲ್ಲಿ ಇಂದು ಬೆಳಗ್ಗಿನಿಂದ ಉತ್ತಮ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಪಂಪ್‌ವೆಲ್, ಉರ್ವಸ್ಟೋರ್, ನೀರುಮಾರ್ಗ, ಜ್ಯೋತಿ, ಸಹಿತ ವಿವಿಧೆಡೆ ರಸ್ತೆಗಳು ಜಲಾವೃತ್ತವಾಗಿದೆ. ಪಿವಿಎಸ್ ಸೇರಿದಂತೆ ಕೆಲವೆಡೆ ಹೋಟೆಲ್ ಹಾಗೂ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ.

ಈ ನಡುವೆ ಅಳಕೆ ಭೋಜರಾವ್ ಲೇನ್‌ನಲ್ಲಿರುವ ಮನೆಯೊಂದರ ಮೇಲೆ ಮರ ಉರುಳಿ ಬಿದ್ದ ಘಟನೆಯೂ ನಡೆದಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
























Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article