
ನಗರಸಭೆ ಕಂಪೌಂಡ್ ಕುಸಿದು ಮೂರು ಆಟೋರಿಕ್ಷಾಗಳಿಗೆ ಹಾನಿ
Sunday, May 25, 2025
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಪುತ್ತೂರು ನಗರಸಭೆಯ ಕಂಪೌಂಡ್ ಕುಸಿದು ಮೂರು ಆಟೋರಿಕ್ಷಾಗಳು ಹಾನಿಗೊಳಗಾಗಿದೆ.
ರವಿವಾರ ಬೆಳಗ್ಗಿನಿಂದಲೇ ಎಡೆಬಿಡದೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಪರಿಣಾಮ ಪುತ್ತೂರು ನಗರಸಭೆಯ ಕಂಪೌಂಡ್ ಕುಸಿದು ಅಲ್ಲಿಯೇ ನಿಲ್ಲಿಸಿದ್ದ ಮೂರು ಆಟೋರಿಕ್ಷಾಗಳ ಮೇಲೆಯೇ ಬಿದ್ದಿದೆ. ಕಲ್ಲು ಮಣ್ಣು ಬಿದ್ದಿರುವ ಕಾರಣ ಮೂರೂ ಆಟೋರಿಕ್ಷಾಗಳು ಹಾನಿಗಿಳಗಾಗಿವೆ.
ಆದರೆ ಆಟೋರಿಕ್ಷಾದಲ್ಲಿ ಯಾರೂ ಇಲ್ಲದ ಕಾರಣ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಸದ್ಯ ಕಂಪೌಂಡ್‌ನ ಕಲ್ಲು ಹಾಗೂ ರಸ್ತೆ ಬದಿ ಬಿದ್ದಿರುವ ಮಣ್ಣು ತೆರವುಗೊಳಿಸಲಾಗಿದೆ.