
ಸಂಚಾರದಲ್ಲಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ: ಮಗು ಸೇರಿ ನಾಲ್ವರಿಗೆ ಗಾಯ
Sunday, May 25, 2025
ಕಡಬ: ಸಂಚಾರದಲ್ಲಿದ್ದ ಕಾರಿನ ಮೇಲೆಯೇ ಬೃಹತ್ ಗಾತ್ರದ ಮರವೊಂದು ಬಿದ್ದು ಮಗು ಸೇರಿ ನಾಲ್ವರು ಗಾಯಗೊಂಡ ಘಟನೆ ಕಡಬ ಸಮೀಪದ ನೂಜಿಬಾಳ್ತಿಲದ ಬಳಿ ನಡೆದಿದೆ.
ಕಾರಿನಲ್ಲಿ ಚಾಲಕ ಸೇರಿದಂತೆ ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸಂಚರಿಸಿತ್ತಿದ್ದರು. ಇವರು ಕುಕ್ಕೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳ ತೆರಳುತ್ತಿದ್ದರು. ಕಾರು ನೂಜಿಬಾಳ್ತಿಲಕ್ಕೆ ಬರುತ್ತಿದ್ದಂತೆ ಕಾರಿನ ಮೇಲೆಯೇ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು ನಾಲ್ವರು ಕಾರಿನೊಳಗೆ ಸಿಲುಕಿಕೊಂಡಿದ್ದರು.
ಸ್ಥಳೀಯರು ಕಾರಿನೊಳಗಿನಿಂದ ಎಲ್ಲರನ್ನೂ ಹೊರತೆಗೆದು ರಕ್ಷಿಸಿದ್ದು, ಎಲ್ಲರಿಗೂ ಮೈ ಕೈಗೆ ತೀವ್ರ ತರಹದ ಗಾಯವಾಗಿದೆ ಎಂದು ಕಾರ್ಯಾಚರಣೆ ನಡೆಸಿದರು ತಿಳಿಸಿದ್ದಾರೆ.