ಧಾರಾಕಾರ ಮಳೆಯ ನಡುವೆಯೇ ನಡುರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದ ಕಾರು

ಧಾರಾಕಾರ ಮಳೆಯ ನಡುವೆಯೇ ನಡುರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದ ಕಾರು


ಮಂಗಳೂರು: ನಗರದ ಕುಲಶೇಖರ ಕಲ್ಪನೆ ಬಳಿ‌ ನಡುರಸ್ತೆಯಲ್ಲಿಯೇ ಕಾರೊಂದು ಧಗಧಗನೇ ಹೊತ್ತಿ ಉರಿದ ಘಟನೆ ನಡೆದಿದೆ.

ರವಿವಾರ ಮಧ್ಯಾಹ್ನ 12ಗಂಟೆಗೆ ಈ ಘಟನೆ ನಡೆದಿದೆ. ಸ್ವಿಫ್ಟ್ ಡಿಸಾಯರ್ ಟ್ಯಾಕ್ಸಿಯಲ್ಲಿ ಮೊದಲಿಗೆ ಹೊಗೆ ಕಾಣಿಸಿಕೊಂಡಿದೆ. ಬಳಿಕ ಕಾರು ಸಂಪೂರ್ಣ ಧಗಧಗನೇ ಹೊತ್ತಿ ಉರಿದಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಕಾರಿನಲ್ಲಿ ಬೆಂಕಿಯ ಜ್ವಾಲೆ ಏಳುತ್ತಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ.‌ ಸದ್ಯ ಸ್ಥಳದಲ್ಲಿದ್ದವರೇ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. 

ಈ ಕಾರು ಯಾರಿಗೆ ಸೇರಿದ್ದು, ಯಾಕಾಗಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಯಾವುದೇ ಸಾವು-ನೋವು ಸಂಭವಿಸಿದಂತೆ ಕಂಡು ಬಂದಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article