ಮಂಗಳೂರು: ಸಿ.ಐ.ಎಸ್.ಎಫ್ ಸಿಬ್ಬಂದಿ ಗೀತಾ ಸಮೋಟಾ ಅವರು ಮೌಂಟ್ ಎವರೆಸ್ಟ್ ತುತ್ತತುದಿ ತಲುಪಿದ ಕೇಂದ್ರೀಯ ಭದ್ರತಾ ಪಡೆ (ಸಿ.ಐ.ಎಸ್.ಎಫ್) ಯ ಪ್ರಪ್ರಥಮ ಸಿಬ್ಬಂದಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಮೌಂಟ್ ಎವರೆಸ್ಟ್ ಪರ್ವತದ ತುತ್ತತುದಿ 8,849 ಮೀಟರ್ ಎತ್ತರವನ್ನು ಇವರು ತಲುಪಿದ್ದಾರೆ ಎಂದು ಸಿ.ಐ.ಎಸ್.ಎಫ್ ಪ್ರಕಟಣೆ ತಿಳಿಸಿದೆ.