ಸುಹಾಸ್ ಶೆಟ್ಟಿ ಸಂಘಟಿತ ಕೊಲೆ: ಎನ್‌ಐಎಗೆ ವಹಿಸಲು ಬಿಜೆಪಿ ಒತ್ತಾಯ

ಸುಹಾಸ್ ಶೆಟ್ಟಿ ಸಂಘಟಿತ ಕೊಲೆ: ಎನ್‌ಐಎಗೆ ವಹಿಸಲು ಬಿಜೆಪಿ ಒತ್ತಾಯ


ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ  ಕೊಲೆ ಸಂಘಟಿತ , ಪೂರ್ವಯೋಜಿತ ಕೃತ್ಯವಾಗಿದ್ದು, ಈ ದುಷ್ಕೃತ್ಯದ ಹಿಂದೆ ನಿಷೇತ ಪಿಎಫ್‌ಐ ಸಂಘಟನೆಯ ಪಾತ್ರವಿದೆ. ಈ ದುಷೃತ್ಯದ ತನಿಖೆಯನ್ನು ಎನ್‌ಐಎಗೆ ವಹಿಸಿದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹೇಳಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆಯನ್ನು ಕೂಲಂಕಷವಾಗಿ ತನಿಖೆ ಮಾಡುವ ಬಗ್ಗೆ ಗುರುವಾರ ಸಂಸದರು, ಶಾಸಕರ ಜತೆ ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಸುಹಾಸ್ ಶೆಟ್ಟಿ  ತನಿಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ಸಾಗುತ್ತಿಲ್ಲ ಎನ್ನುವುದು ನಮ್ಮ ಆತಂಕ. ಈ ಬಗ್ಗೆ ಪೊಲೀಸ್ ಕಮಿಷನರ್ ಜತೆ ಸಮಗ್ರವಾಗಿ ಚರ್ಚೆ ಮಾಡಿ, ಈ ಪ್ರಕರಣದ ಬಗ್ಗೆ ನಮಗಿರುವ ಅನುಮಾನವನ್ನು ಅವರ ಬಳಿ ಮನದಟ್ಟು ಮಾಡಿದ್ದೇವೆ. ಸುಹಾಸ್ ಕೊಲೆಗೆ ಅಂತಾರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ನೆರವು ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ರಾಜ್ಯ ಸರಕಾರ ವಾಸ್ತವವನ್ನು ಮುಚ್ಚಿ ಹಾಕಲು ವಿಫಲ ಪ್ರಯತ್ನ ಮಾಡುತ್ತಿದೆ ಎಂದರು.

ಈ ಪ್ರಕರಣದಲ್ಲಿ ಬಂತರಾಗಿರುವ 8 ಮಂದಿ ಮಾತ್ರವಲ್ಲ ನೇರವಾಗಿ ಶಾಮೀಲಾಗಿರುವ ಎಲ್ಲ ವ್ಯಕ್ತಿಗಳನ್ನು ಬಂಸಬೇಕು, ಆರೋಪಿಗಳಿಗೆ ಆಶ್ರಯ ನೀಡಿದವರು, ಮಾಹಿತಿದಾರರು, ವಾಹನ ಒದಗಿಸಿದವರು, ಘಟನೆಯಲ್ಲಿ ಕಾಣಿಸಿಕೊಂಡ ಮಹಿಳೆಯರು, ಹಣಕಾಸು ನೆರವು ನೀಡಿದವರು ಸೇರಿದಂತೆ ಪರೋಕ್ಷವಾಗಿ ಸಹಕಾರ ನೀಡಿದವರು ಸೇರಿದಂತೆ 30 ರಿಂದ 40 ಮಂದಿಯ ಕೈವಾಡವಿದೆ. ಪೊಲೀಸರು ಒತ್ತಡಕ್ಕೆ ಒಳಗಾಗದೆ ತನಿಖೆಯನ್ನು ಚುರುಕುಗೊಳಿಸಬೇಕು,

ಕ್ರಿಮಿನಲ್ ಚಟುವಟಿಕೆ ವಿರುದ್ಧ ಕ್ರಮದಿಂದ ಪೊಲೀಸ್ ಇಲಾಖೆಗೆ ಬಗ್ಗೆ ಗೌರವ ಮತ್ತು ಭಯ ನಿರ್ಮಾಣವಾಗಬೇಕು. ಪೊಲೀಸ್ ಇಲಾಖೆ ಸರಕಾರ ಘಟನೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು, ಪ್ರಕರಣ ಎನ್‌ಐಎಗೆ ವಹಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯ ಎಂದು ಹೇಳಿದರು.

ಸುಹಾಸ್ ಕೊಲೆ ಪ್ರಕರಣದಲ್ಲಿ ಬಜಪೆ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಪಾತ್ರದ ಬಗ್ಗೆಯೂ ಕಮಿಷನರ್ ಗಮನಕ್ಕೆ ತಂದಿದ್ದೇವೆ. ರೌಡಿಶೀಟರ್ ಸಂಬಂಸಿದಂತೆ ಹೋರಾಟ ಮಾಡಿದವರು ಮತ್ತು ಕೊಲೆಗಾರರನ್ನು  ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ನನ್ನ ಮೇಲೂ ಹಿಂದೆ 27 ಪ್ರಕರಣವಿದ್ದು, ನಾವು ಒಂದು ಸ್ಪಷ್ಟ ವಿಚಾರ, ಸಿದ್ಧಾಂತವಿಟ್ಟು ಹೋರಾಟ ಮಾಡಿದವರು ಎಂದರು.

ಗೃಹಸಚಿವರು ಘಟನೆಯನ್ನು ಸರಿಯಾಗಿ ವಿಮರ್ಶಿಸದೆ ಎನ್‌ಐಎಗೆ ಪ್ರಕರಣ ನೀಡಲಾಗದು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಮುಸ್ಲಿಂ ಸಮುದಾಯದವರು ಐಬಿಯಲ್ಲಿ ಬೆದರಿಸಿದ ಕಾರಣ ಅದಕ್ಕೆ ಹೆದರಿ ಗೃಹಸಚಿವರು ಹೇಳಿಕೆ ನೀಡಿರಬಹುದು. ತುರ್ತು ಹೋರಾಟಕ್ಕೆ ಯೋಜನೆ ರೂಪಿಸಿದ್ದೆವು, ಆದರೆ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದ ಕಾರಣ ಹೋರಾಟ ಮುಂದಕ್ಕೆ ಹಾಕಿದ್ದೇವೆ ಎಂದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್ ಮೊದಲಾದವರಿದ್ದರು.

ಬಿಜೆಪಿ ರಾಷ್ಟ್ರಾಧ್ಯಕ್ಷರು ಜಿಲ್ಲೆಗೆ..

ಮೇ 11ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ಜಗತ್‌ಪ್ರಕಾಶ್ ನಡ್ಡಾ (ಜೆ.ಪಿ. ನಡ್ಡಾ) ಅವರು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ.

11ಮತ್ತು 12ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭ ಸುಹಾಸ್ ಮನೆಗೂ ಭೇಟಿ ನೀಡಲು ವಿನಂತಿ ಮಾಡಿದ್ದು, 11ರಂದು ಬೆಳಗ್ಗೆ ಸುಹಾಸ್ ಮನೆಗೆ  ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ನೀಡಲಿದ್ದಾರೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article