
‘ಫಿಲೋ ಕಾರ್ನಿವಲ್-2025’: ಪಿ.ಜಿ ಫೆಸ್ಟ್ ಸಮಾರೋಪ
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಫಿಲೋ ಕಾರ್ನಿವಲ್ 2025 ಪಿ.ಜಿ. ಫೆಸ್ಟ್‌ನ ಸಮಾರೋಪ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಕಾಲೇಜಿ ನ ಸಿಲ್ವರ್ ಜುಬಿಲಿ ಹಾಲ್‌ನಲ್ಲಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಇಂಪಿರಿಯರ್ ಫರ್ನಿಚರ್‌ನ ಮಾಲಕಿ ವ್ಯಾಲೆಟ್ ನತಾಲಿಯಾ ಪಿಂಟೋ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುದರಿಂದ ಮುಂದಿನ ಜೀವನಕ್ಕೆ ಬೇಕಾದ ಕೌಶಲ್ಯಗಳ ಅಭಿವೃದ್ಧಿಯಾಗುತ್ತದೆ, ಇಂತಹ ಫೆಸ್ಟ್‌ಗಳ ಆಯೋಜನೆ ಅಗತ್ಯ ‘ಎನ್ನುತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಕುಲಸಚಿವರು (ಶೈಕ್ಷಣಿಕ) ಡಾ. ನಾರ್ಬರ್ಟ್ ಮಸ್ಕರೇನಸ್ ಮಾತನಾಡಿ ಸೋಲು ಗೆಲುವೆನ್ನದೆ ಸ್ಪರ್ದೆಗಳಲ್ಲಿ ಭಾಗವಹಿಸುವುದು ಬಹು ಮುಖ್ಯ ಹಾಗೂ ಕಾಲೇಜಿನ ವಿಶೇಷತೆಗಳ ಬಗೆಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪಿ.ಜಿ ಕೋರ್ಸಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಶ್ರೀಮಣಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ವಿಪಿನ್ ನಾಯ್ಕ್, ಗಣಿತಶಾಸ್ತ್ರದ ಮುಖ್ಯಸ್ಥ ಪ್ರೊ. ಗಣೇಶ್ ಭಟ್, ಎಂಕಾಂ ವಿಭಾಗದ ಮುಖ್ಯಸ್ಥ ಹರ್ಷಿತ್ ಉಪಸ್ಥಿತರಿದ್ದರು.
ಪಿ.ಜಿ. ಕೋರ್ಸಿನ ಸಮಾಜ ಕಾರ್ಯ, ಎಂ.ಸ್ಸಿ ಭೌತಶಾಸ್ತ್ರ, ಗಣಿತಶಾಸ್ತ್ರ ಹಾಗೂ ಎಂಕಾಂ ವಿಭಾಗವು ವಿವಿಧ ಸ್ಪರ್ದೆಗನ್ನು ಆಯೋಜಿಸಿದ್ದು, ಹಲವು ಕಾಲೇಜಿನ ಸುಮಾರು 34 ತಂಡಗಳು ವಿವಿಧ ಪಿ.ಜಿ ವಿಭಾಗದ ಇವೆಂಟಗಳಲ್ಲಿ ಭಾಗವಹಿಸಿದ್ದರು. ಸಮಾಜ ಕಾರ್ಯ ವಿಭಾಗದ ಇವೆಂಟಲ್ಲಿ ಸರಕಾರಿ ಫಸ್ಟ್ ಗ್ರೇಡ್ ಕಾಲೇಜು, ಸುಳ್ಯ ರನ್ನರ್ ಅಪ್ ಹಾಗೂ ಅಕ್ಷಯ ಕಾಲೇಜು, ಪುತ್ತೂರು ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡರು.
ಎಂ.ಸ್ಸಿ ಭೌತಶಾಸ್ತ್ರ, ಗಣಿತಶಾಸ್ತ್ರ ವಿಭಾಗದ ಇವೆಂಟಳಲ್ಲಿ ಆಳ್ವಾಸ್ ಕಾಲೇಜು ಮೂಡಬಿದ್ರೆ, ರನ್ನರ್ ಅಪ್ ಮತ್ತು ವಿವೇಕಾನಂದ ಕಾಲೇಜು, ಪುತ್ತೂರು ಚಾಂಪಿಯನ್ಸ್ ಟ್ರೋಫಿಯನ್ನು ಪಡೆದುಕೊಂಡರು, ಎಂಕಾಂ ವಿಭಾಗದ ಇವೆಂಟಳಲ್ಲಿ ವಿವೇಕಾನಂದ ಕಾಲೇಜು, ಪುತ್ತೂರು ರನ್ನರ್ ಅಪ್ ಹಾಗೂ ಅಕ್ಷಯ ಕಾಲೇಜು, ಪುತ್ತೂರು ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಉಪನ್ಯಾಸಕರು, ವಿವಿಧ ವಿಜೇತ ತಂಡಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶರಣ್ಯ, ಸ್ವಾಗತಿಸಿ, ನೇಹಾ ವಂದಿಸಿದರು. ರೇಚಲ್ ನಿರೂಪಿಸಿದರು.