
ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಅಕಾಡೆಮಿಕ್ ಹಾಗೂ ಆಡಳಿತಾತ್ಮಕ ವೀಕ್ಷಣಾ ಪರಿಶೀಲನೆ’: ಕಾರ್ಯಾಗಾರ
Friday, May 9, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು ಇದರ ಸ್ಟಾಫ್ ಡೆವಲಪ್ಮೆಂಟ್ ಅಂಡ್ ಅಪ್ರೈಸಲ್ ಸೆಲ್ ಆಶ್ರಯದಲ್ಲಿ ‘ಅಕಾಡೆಮಿಕ್ ಮತ್ತು ಆಡಳಿತಾತ್ಮಕ ವೀಕ್ಷಣಾ ಪರಿಶೀಲನೆ’ (Academic and Administrative Audit) ಕುರಿತು ಶಿಕ್ಷಕರಿಗಾಗಿ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮವನ್ನು ಕಾಲೇಜಿನ ಸ್ನಾತಕೋತ್ತರ ಸೆಮಿನಾರ್ ಹಾಲ್‌ನಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಂಟಣಿ ಪ್ರಕಾಶ್ ಮೊಂತೆರೊ ಅವರು ಮಾತನಾಡಿ, ‘ಜ್ಞಾನವು ವ್ಯಕ್ತಿಯನ್ನು ಶಸ್ತ್ರಸಜ್ಜಿತಗೊಳಿಸುತ್ತೆ, ಆದರೆ ಉತ್ಸಾಹವೇ ವ್ಯಕ್ತಿಯ ಪ್ರಗತಿಗೆ ನಿಜವಾದ ಚಾಲಕಶಕ್ತಿಯಾಗುತ್ತದೆ. ಉತ್ಸಾಹದಿಂದಲೇ ನಾವು ನವೀನತೆ, ಸೃಜನಾತ್ಮಕತೆ ಹಾಗೂ ನಿರಂತರ ಅಧ್ಯಯನದ ಹಾದಿಯಲ್ಲಿ ಸಾಗಬಲ್ಲೆವು’ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ಎಸ್ಡಿಎಂ ಕಾಲೇಜು (ಸ್ವಾಯತ್ತ)ದ ನಿವೃತ್ತ ಪ್ರಾಂಶುಪಾಲರಾದ ಡಾ. ಪಿ.ಎನ್. ಉದಯಚಂದ್ರ ಅವರು ತಮ್ಮ ಪ್ರಾಮಾಣಿಕ ಹಾಗೂ ಆಳವಾದ ಅಳವಡಿಕೆಯಿಂದ ಶ್ರೋತೃವರ್ಗವನ್ನು ಆಕರ್ಷಿಸಿದರು. ವಿಷಯದ ಬಗ್ಗೆ ಅವರ ಸಮೃದ್ಧ ಅನುಭವ ಮತ್ತು ಅಧ್ಯಯನವು ಭಾಗವಹಿಸಿದ ಉಪನ್ಯಾಸಕರಿಗೆ ವಿಶ್ಲೇಷಣಾತ್ಮಕ ಬೌದ್ಧಿಕ ನೆಲೆಯಲ್ಲಿ ಆಳವಾದ ಅರಿವನ್ನು ನೀಡಿತು.
ಪಿಜಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀರಾಗ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಎಡ್ವಿನ್ ಡಿ’ಸೋಜಾ ಸ್ವಾಗತಿಸಿ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪೂಜಾಶ್ರೀ ವಿ. ರೈ ಕಾರ್ಯಕ್ರಮ ನಿರ್ವಹಿಸಿದರು. IQAC ಸಂಯೋಜಕಿ ಡಾ. ಮಾಲಿನಿ ಕೆ. ಉಪಸ್ಥಿತರಿದ್ದರು.