ರಾಮನಗರ ಹೆಸರು ಬದಲಾವಣೆ ಹಿಂದೆ ಲ್ಯಾಂಡ್ ಮಾಫಿಯಾ: ಶೋಭಾ ಕರಂದ್ಲಾಜೆ

ರಾಮನಗರ ಹೆಸರು ಬದಲಾವಣೆ ಹಿಂದೆ ಲ್ಯಾಂಡ್ ಮಾಫಿಯಾ: ಶೋಭಾ ಕರಂದ್ಲಾಜೆ


ಸುಳ್ಯ: ಬೆಂಗಳೂರು ಅನ್ನುವ ಪದದಲ್ಲಿ ಲ್ಯಾಂಡ್ ಮಾಫಿಯಾ ಇದೆ. ರಾಮನಗರ ಹೆಸರು ತೆಗೆದು, ಬೆಂಗಳೂರು ಸೇರಿಸಿರುವುದೇ ಲ್ಯಾಂಡ್ ಮಾಫಿಯಾ ಕಾರಣಕ್ಕಾಗಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಸುಳ್ಯದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಸುತ್ತಮುತ್ತ ಯಾರು ಲ್ಯಾಂಡ್ ಮಾಫಿಯಾ ನಡೆಸುತ್ತಿದ್ದಾರೆ ಅವರಿಗೆ ರಾಮನಗರ ಹೆಸರು ಬೇಕಾಗಿಲ್ಲ. ಅವರಿಗೆ ಬೆಂಗಳೂರು ಹೆಸರು ಬೇಕು. ಅವರ ಜಮೀನಿಗೆ ಮೌಲ್ಯ ಬರಬೇಕು. ಈ ಕಾರಣಕ್ಕಾಗಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲಾಗಿದೆ. ಲ್ಯಾಂಡ್ ಮಾಫಿಯಾದ ಶಕ್ತಿಗಳು, ದೊಡ್ಡ ದೊಡ್ಡ ಕುಳಗಳು ಇವತ್ತು ರಾಮನಗರ ಹೆಸರು ತೆಗೆದು ಬೆಂಗಳೂರು ಎಂಬ ಹೆಸರು ಇಡುತ್ತಿದ್ದಾರೆ ಇದರ ಹಿಂದೆ ಲ್ಯಾಂಡ್ ಮಾಫಿಯಾ ಇದೆ. ಇತರ ಹಿಂದೆ ಇರುವುದು ರೈತರ ಜಮೀನು ಕಿತ್ತುಕೊಂಡು, ಬೇರೆಯವರಿಗೆ ಕೊಡುವಂತಹದ್ದು, ಲೇಔಟ್ ಮಾಡುವಂತಹದ್ದು, ಕೈಗಾರಿಕೆಗಳಿಗೆ ಕೊಡುವ ದೊಡ್ಡ ಶಕ್ತಿ, ಷಡ್ಯಂತ್ರ ಇದೆ. ಆದ್ದರಿಂದ ರಾಮನಗರ ಹೆಸರು ಹಾಗಯೇ ಉಳಿದ ಬೇಕು ಎಂದು ನಾನು ಆಗ್ರಹಿಸುವುದಾಗಿ ತಿಳಿಸಿದ ಅವರು, ಆ ಜಿಲ್ಲೆಯವರು ಇದಕ್ಕೆ ಶಕ್ತಿ ನೀಡಬೇಕು ಎಂದು ಆ ಜಿಲ್ಲೆಯ ಜನರಲ್ಲಿ ಆಗ್ರಹ ಮಾಡುತ್ತೇನೆ ಎಂದರು.

ಕರ್ನಾಟಕ ರಾಜ್ಯ ಸರಕಾರ ಆಸ್ಪತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರವನ್ನು ಅವರು ಖಂಡಿಸಿದರು. ಜನೌಷಧಿ ರೋಗಿಗಳಿಗೆ ಮಾತ್ರವಲ್ಲ, ಆಸ್ಪತ್ರೆಗೆ ಬರುವವರು, ಅಕ್ಕಪಕ್ಕದವರಿಗೆ ಪ್ರಯೋಜನವಾಗುತ್ತಿದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article