
ನಾಗಪಟ್ಟಣ ಡ್ಯಾಂನ ಷಟರ್ ತೆರವು: ಅಪಾರ ಪ್ರಮಾಣದಲ್ಲಿ ನೀರು ಹೊರಕ್ಕೆ
Sunday, May 25, 2025
ಸುಳ್ಯ: ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾಗಪಟ್ಟಣ ಬಳಿಯಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ವೆಂಟೆಡ್ ಡ್ಯಾಮ್‌ನ ಷಟರ್‌ಗಳನ್ನು ತೆರೆಯಲಾಗಿದೆ. ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಮಾಡುವ ಡ್ಯಾಮ್‌ನ ಷಟರ್ ತೆರೆದು ನೀರನ್ನು ಹೊರ ಬಿಡಲಾಗುತಿದೆ.
ತಂತ್ರಜ್ಞರ ತಂಡ ಡ್ಯಾಮ್‌ನ ಷಟರ್‌ಗಳನ್ನು ಭಾನುವಾರ ಸಂಜೆ ತೆರೆದರು. ಪಯಸ್ವಿನಿ ನದಿಯು ಮೈ ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜನರು ಜಾಗರುಕರಾಗಿ ಇರುವಂತೆ ಜೊತೆಗೆ ಬಟ್ಟೆ ಒಗೆಯಲು, ಸ್ನಾನ ಮಾಡಲು ಮತ್ತಿತರ ಅಗತ್ಯತೆಗಳಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ವಹಿಸಲು ಸ್ಥಳೀಯ ಆಡಳಿತ ಸೂಚಿಸಿದೆ. ಬೇಸಿಗೆಯಲ್ಲಿ 12 ಷಟರ್‌ಗಳನ್ನು ಹಾಕಿ 4 ಮೀಟರ್ ಎತ್ತರದಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆ. ಇದೀಗ ಮಳೆಗಾಲ ಆರಂಭಗೊಂಡ ಹಿನ್ನಲೆಯಲ್ಲಿ ಎಲ್ಲಾ ಷಟರ್‌ಗಳನ್ನು ಓಪನ್ ಮಾಡಲಾಗುತ್ತದೆ.