ಕುಲುಮೆ ಅಂಗಡಿಯಿಂದ ನಗದು ಕಳವು

ಕುಲುಮೆ ಅಂಗಡಿಯಿಂದ ನಗದು ಕಳವು

ಬಂಟ್ವಾಳ: ಇಲ್ಲಿನ ಅಮ್ಟಾಡಿ ಗ್ರಾಮದ ಲೊರೆಟ್ಟೋ ಪದವು ಎಂಬಲ್ಲಿರುವ ಕುಲುಮೆ ಅಂಗಡಿಯ ತಗಡು ಶೀಟುನಿಂದ ಬಾಗಿಲಿಗೆ ಅಳವಡಿಸಿದ ಬೀಗವನ್ನು ಮುರಿದು ನಗದು ಹಣ ಕಳವುಗೈದ ಘಟನೆ ನಡೆದಿದೆ.

ಬಂಟ್ವಾಳ ಕಸ್ಬಾ ಗ್ರಾಮದ ಕಮಲಾಕ್ಷಎಂಬವರ ಅಂಗಡಿಯಲ್ಲಿ ಈ ಕಳವು ಕೃತ್ಯ ನಡೆದಿದೆ. ಎಂದಿನಂತೆ ಇವರು ಶನಿವಾರ ಸಂಜೆ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದು, ಭಾನುವಾರ ಬೆಳಗ್ಗೆ ಅಂಗಡಿಯ ಪಕ್ಕದಲ್ಲಿರುವ ಹಾಲಿನ ಡೈರಿಗೆ ಹಾಲು ಹಾಕಲು ಬಂದಿದ್ದ ನವೀನಾಕ್ಷ ಎಂಬವರು ಅಂಗಡಿ ಬೀಗ ಮುರಿದಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದರು.

ಕಮಲಾಕ್ಷ ಅವರು ತಕ್ಷಣ ಅಂಗಡಿ ಅಗಮಿಸಿ ನೋಡಿದಾಗ ಎದುರಿನ ಬಾಗಿಲಿಗೆ ಅಳವಡಿಸಿದ ಬೀಗವನ್ನು ಮುರಿದು ಕಳ್ಳರು ಒಳಪ್ರವೇಶಿಸಿ ನಿರ್ಮಾಣ ಹಂತದಲ್ಲಿರುವ ಹೊಸಮನೆಗೆ ಸಮಾಗ್ರಿಗಳನ್ನು ಖರೀದಿಸಲು ಹೊಂದಿಸಿಟ್ಟಿದ್ದ ನಗದು ೬೫ ಸಾ.ರೂ. ಮತ್ತು ಡ್ರಾವರ್‌ನಲ್ಲಿಟ್ಟಿದ್ದ ಕೆನರಾ ಬ್ಯಾಂಕ್‌ನಿಂದ ಪಡೆದಿದ್ದ ಠೇವಣಿ ಬಾಂಡ್ ಕಳವುಗೈದಿರುವುದು ಕಂಡುಬಂದಿದೆ.

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article