
ಸಾರ್ವಜನಿಕ ಕೊಳವೆ ಬಾವಿ ಉದ್ಘಾಟನೆ
Saturday, June 21, 2025
ದೇರಳಕಟ್ಟೆ: ಜಮಾಅತೆ ಇಸ್ಲಾಮಿ ಹಿಂದ್, ಸಮಾಜ ಸೇವಾ ಘಟಕ ಉಳ್ಳಾಲ ಇದರ ಆಶ್ರಯದಲ್ಲಿ ಕೊಣಾಜೆ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಸಾರ್ವಜನಿಕ ಕೊಳವೆ ಬಾವಿ ಉದ್ಘಾಟನಾ ಕಾರ್ಯಕ್ರಮ ಶನಿವಾರ ಅಡ್ಕರೆಪಡ್ಪು ಬಳಿ ನಡೆಯಿತು.
ಬೋಳಂಗಡಿ ಹವ್ವಾ ಮಸೀದಿ ಖತೀಬ್ ಯಹ್ಯಾ ತಂಙಳ್ ಮದನಿ ಕೊಳವೆ ಬಾವಿ ಉದ್ಘಾಟಿಸಿ ಮಾತನಾಡಿ, ನೀರು, ಊಟ ಇವುಗಳ ಮಹತ್ವ ಹಾಗೂ ಇವುಗಳಿಗೆ ನೀಡಬೇಕಾದ ಆದ್ಯತೆ ಬಗ್ಗೆ ವಿವರಿಸಿದರು.
ಮೊಹಮ್ಮದ್ ರಿಹಾನ್ ಕಿರಾಅತ್ ಪಠಿಸಿದರು.
ಕೊಣಾಜೆ ಗ್ರಾ.ಪಂ. ಅಧ್ಯಕ್ಷೆ ಗೀತಾ ದಾಮೋದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊಣಾಜೆ ಗ್ರಾ.ಪಂ. ಉಪಾಧ್ಯಕ್ಷ ಹರಿಶ್ಚಂದ್ರ ಶೆಟ್ಟಿಗಾರ್, ಸದಸ್ಯರಾದ ಹೈದರ್ ಹಮೀದ್, ಫೌಝಿಯಾ, ಝೋಹರ, ಚಂಚಲಾಕ್ಷಿ, ಪಿಡಿಓ ಮುತ್ತಪ್ಪ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ಅಧ್ಯಕ್ಷ ಹುಸೈನ್, ವನಿತ, ಮೊಹಮ್ಮದ್ ಅಸೈ, ಅಚ್ಯುತ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಾಜ ಸೇವಾ ವಿಭಾಗದ ಸಂಚಾಲಕ ಇಸ್ಹಾಕ್ ಹಸನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ರವೂಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.