
ಮಾದಕ ದ್ರವ್ಯ ಸಾಗಾಟ: ಮೂವರು ವಿದೇಶಿಗರ ಸಹಿತ 11 ಮಂದಿಯ ಬಂಧನ
Sunday, June 22, 2025
ಕಾಸರಗೋಡು: ಮಾದಕ ದ್ರವ್ಯ ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಜೇಶ್ವರ ಬಾಯಾರುಪದವು ನಿವಾಸಿ ಹಾಗೂ ಇನ್ನೋರ್ವ ಆರೋಪಿ ವಿಚಾರಣೆ ವೇಳೆ ನೀಡಿದ ಹೇಳಿಕೆಯ ಜಾಡು ಹಿಡಿದು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳಕ್ಕೆ ಮಾದಕ ವಸ್ತು ಸಾಗಿಸುವ ಜಾಲಕ್ಕೆ ಸೇರಿದ ಮೂವರು ವಿದೇಶಿಗರ ಸಹಿತ 11 ಮಂದಿಯನ್ನು ಬಂಧಿಸಲಾಗಿದೆ.
ತಾಂಜೇನಿಯಾ ನಿವಾಸಿಗಳಾದ ಡೇವಿಡ್ ಎನ್ಸ್ಮಿ, ಅಶ್ಕ್ ಅರುಣ್ ಮತ್ತು ಫ್ರಾಂಕ್ ಹಾಗೂ 9 ಮಂದಿ ಇತರ ರಾಜ್ಯಗಳ ನಿವಾಸಿಗಳನ್ನು ಬಂಧಿಸಲಾಗಿದೆ.