ಆಮ್ನಾಯಃ ಗಾಳಿಮನೆ ದ್ವಿತೀಯ ವಾರ್ಷಿಕೋತ್ಸವ ಮತ್ತೂ ಪಾಕ್ಷಿಕ ತಾಳಮದ್ದಳೆ ಸರಣಿ ಉದ್ಘಾಟನೆ

ಆಮ್ನಾಯಃ ಗಾಳಿಮನೆ ದ್ವಿತೀಯ ವಾರ್ಷಿಕೋತ್ಸವ ಮತ್ತೂ ಪಾಕ್ಷಿಕ ತಾಳಮದ್ದಳೆ ಸರಣಿ ಉದ್ಘಾಟನೆ


ಮೂಡುಬಿದಿರೆ: ಆಮ್ನಾಯಃ -ಯಕ್ಷ ಸಂಸ್ಕೃತಿ ಬಳಗ, ಗಾಳಿಮನೆಯ ದ್ವಿತೀಯ ವಾರ್ಷಿಕೋತ್ಸವ ಕಾಯ೯ಕ್ರಮವು ಭಾನುವಾರ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಭವನದಲ್ಲಿ ನಡೆಯಿತು. 


ಮೂಡುಬಿದಿರೆ ಜೈನ ಮಠ ಭಟ್ಟಾರಕ ಚಾರುಕೀತಿ೯ ಸ್ವಾಮೀಜಿ ಆಶೀರ್ವಚನ ನೀಡಿ ಕಲಾವಿದರು ಎಲ್ಲಾ ಪಾತ್ರಗಳನ್ನೂ ಭಕ್ತಿ, ಶ್ರದ್ಧೆ, ಜೀವಂತಿಕೆಯಿಂದ ಜನರೆದುರು ಪ್ರದಶಿ೯ಸಬೇಕು ಎಂದು ಶುಭ ಹಾರೈಸಿದರು. 


ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿ ಸಂಸ್ಥೆಗೆ ಶುಭ ಹಾರೈಸಿದರು. 

ಪ್ರಧಾನ ಅಭ್ಯಾಗತರಾಗಿ ಭಾಗವಹಿಸಿದ್ದ ಉಜಿರೆ ಅಶೋಕ ಭಟ್ ಮಾತನಾಡಿ ರಂಗಭೂಮಿಯ ತಾಳಮದ್ದಳೆ ಉತ್ತಮ ಚೌಕಟ್ಟಿನಲ್ಲಿ ಭಾವ ಪುಷ್ಠಿಯಿಂದ ಸದಾರುಚಿ ಮೂಡಿಸಲು ಆಶಿಸಿದ ಅವರು ಬಳಗವು ಕಠಿಣ ಹಾದಿಯಲ್ಲಿ ಸುಲಲಿತವಾಗಿ ನಡೆಯುವ ಪ್ರಯತ್ನದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಹಿರಿಯ ಸಹಕಾರಿ ಧುರೀಣ ದಯಾನಂದ ಪೈ, ಭುಜಬಲಿ‌ ಧರ್ಮಸ್ಥಳ  ಡಾ. ಪ್ರಸನ್ನ ಕಾಕುಂಜೆ, ರಾಘವೇಂದ್ರ ಭಂಡಾರ್ ಕಾರ್ ಭಾಗವಹಿಸಿ ಶುಭ ಕೋರಿದರು.

ಡಾ.ವಿನಾಯಕ ಚಂದ್ರಶೇಖರ. ಭಟ್ಟ ಗಾಳಿಮನೆ ಸ್ವಾಗತಿಸಿ,  ಪಾಕ್ಷಿಕ ತಾಳಮದ್ದಳೆ ಸರಣಿಯ ಸಹ ಸಂಯೋಜಕ ಶಿವಪ್ರಸಾದ್ ಭಟ್ ಕಾಂತಾವರ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article