
ಸರಕಾರಿ ಪ.ಪೂ. ಬಾಲಕಿಯರ ಕಾಲೇಜು ಬಲ್ಮಠ ವಿದ್ಯಾರ್ಥಿ ಸಂಘದ ಉದ್ಘಾಟನೆ
ಮಂಗಳೂರು: ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಬಲ್ಮಠ ಮಂಗಳೂರು ಇದರ 2025-26ನೇ ಸಾಲಿನ ವಿದ್ಯಾರ್ಥಿ ಸಂಘ, ಹಾಗೂ ರೇಂಜರ‍್ಸ್, ರೆಡ್‌ಕ್ರಾಸ್ ಹಾಗೂ ಸೇವಾದಳ ಘಟಕದ ಉದ್ಘಾಟನೆಯು ಇತ್ತೀಚೆಗೆ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ಕಿಟೆಲ್ ಮೆಮೋರಿಯಲ್ ಕಾಲೇಜು ಗೋರಿಗುಡ್ಡ ಮಂಗಳೂರು ಇಲ್ಲಿನ ಪ್ರಾಂಶುಪಾಲ ವಿಠಲ್ ವಿ. ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ, ಗುರುಹಿರಿಯರಿಗೆ ಗೌರವ ನೀಡುವುದರೊಂದಿಗೆ ಉಪನ್ಯಾಸಕರು ಕಾಲಕಾಲಕ್ಕೆ ನೀಡುವ ಮಾರ್ಗದರ್ಶನವನ್ನು ಧನಾತ್ಮಕವಾಗಿ ಸ್ವೀಕರಿಸಿ ಸಂಸ್ಥೆ, ಸಮಾಜ ಹಾಗೂ ದೇಶಕ್ಕೆ ಪೂರಕ ಶಕ್ತಿಗಳಾಗಿ ಬದುಕನ್ನು ರೂಪಿಸಬೇಕೆಂದು ತಿಳಿಸಿದರು. ಹಾಗೂ ವಿದ್ಯಾಥಿ ಸಂಘದ ಪದಾದಿಕಾರಿಗಳು ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರು ವಿದ್ಯಾರ್ಥಿ ಸಂಘದ ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಯಶೋಧ, ವಿವಿಧ ಸಂಘಗಳ ಸಂಚಾಲಕರಾದ ದೀಪಿಕಾ ಟಿ., ಸಿಂಥಿಯಾ, ಪ್ರೇಮಲತ, ಸೌಜನ್ಯ, ವಿದ್ಯಾರ್ಥಿ ಸಂಘದ ನಾಯಕಿ ಆರೂಫ ಖತೀಜತ್ ಸೇರಿದಂತೆ ವಿವಿಧ ಸಂಘದ ಎಲ್ಲಾ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಭಿಜ್ಞಾ ಸ್ವಾಗತಿಸಿ, ಐಶ್ವರ್ಯ ವಂದಿಸಿದರು. ತಿತೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.