ಹಿರಿಯರ ಚಿಕಿತ್ಸಾ, ಪಾಲನಾ ಕೇಂದ್ರ ಆರಂಭ

ಹಿರಿಯರ ಚಿಕಿತ್ಸಾ, ಪಾಲನಾ ಕೇಂದ್ರ ಆರಂಭ


ಮಂಗಳೂರು: ಮಂಗಳೂರಿನ ಪಳ್ನೀರುವಿನಲ್ಲಿ  ನೂತನವಾಗಿ ಒಲವಿನ ಆಸರೆ ಎಂಬ ಹಿರಿಯರ ಚಿಕಿತ್ಸಾ ಕೇಂದ್ರ, ಪಾಲನಾ ಕೇಂದ್ರವನ್ನು ಹಾಗೂ ರಕ್ತ ದಾನ ಶಿಬಿರವನ್ನು  ಶುಕ್ರವಾರ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ನಮ್ಮ ಹಿರಿಯರಿಗೆ ಅವರ  ವೃದ್ಧಾಪ್ಯದ ಕಾಲದಲ್ಲಿ ಉತ್ತಮ ಜೀವನ ನಡೆಸುವಂತಾಗಲು ಹೆಚ್ಚಿನ ಆರೈಕೆ ಸಹಾನುಭೂ ತಿ, ಅವರೊಂದಿಗೆ ಬೆರೆತು ಕಾಲ ಕಳೆಯುವಂತಹ ವಾತಾವರಣಗಳು ಸಿಗಬೇಕು. ಮನೆಗಳಲ್ಲಿ ಇರುವಂತಹ ಹಿರಿಯರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಕಿವಿಮಾತು ಹೇಳಿದರು.

ಪದ್ಮಶ್ರೀ ಹರೇಕಳ ಹಾಜಪ್ಪ  ಹಾಗೂ ವಿಧಾ ನಸಭಾ ಸ್ಪೀಕರ್ ಯುಟಿ ಖಾದರ್ ಮಾತನಾಡಿ ಉತ್ತಮ ಸೇವಾ ಕಾರ್ಯಗಳಿಗೆ  ಎಲ್ಲರೂ ಪ್ರೋ ತ್ಸಾಹ ನೀಡಬೇಕಿದೆಯೆಂದರು.

ಕಾರ್ಯಕ್ರಮದಲ್ಲಿ  ಪದ್ಮಶ್ರೀ ಹರೇಕಳ ಹಾಜಬ್ಬ, ಗೃಹರಕ್ಷಕ ಸಿಬ್ಬಂದಿ ಅಬ್ದುಲ್ ರವೂಫ್, ನಿಕಟಪೂರ್ವ ಮಹಾನಗರ ಪಾಲಿಕೆಯ ಸದಸ್ಯ ಗಣೇಶ್ ಕುಲಾಲ್, ಬೀದಿಶ್ವಾನಗಳ ಸಹಿತ ಪ್ರಾಣಿಗಳ ಆರೆ‘ಕೆಯಲ್ಲಿ ತೊಡಗಿರುವ ರಜನಿ ದಾಮೋದರ್ ಶೆಟ್ಟಿ  ಅವರನ್ನು ಸಮ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ತಮ್ಮಣ್ಣ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯ ಕ್ಷೆ  ಕಸ್ತೂರಿ ಪಂಜ, ಒಲವಿನ ಆಸರೆ ಸಂಸ್ಥೆಯ ಪಾಲುದಾರದ ರೂಪ ಕೆಎಸ್,  ಆಶಿಕ್ ಭಂಡಾರಿ ಪುತ್ತೂರು, ಶಕುಂತಲಾ ಪುತ್ತೂರು, ಮನೆ ಮಾಲೀಕ ರಾದ ಎಂ. ಎ ಸಿದ್ದಿಕ್,ಮಯೂರ್ ಉಳ್ಳಾಲ್. ಡಾ.ಅಣ್ಣಯ್ಯ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article