ಶೋಕಾಸ್ ನೋಟೀಸಿಗೆ ಉತ್ತರ ಬಂದಿಲ್ಲ-ಶಿಸ್ತುಕ್ರಮದ ಬಗ್ಗೆ ಪಕ್ಷ ತೀರ್ಮಾನಿಸಲಿದೆ: ಶಿವಕುಮಾರ್

ಶೋಕಾಸ್ ನೋಟೀಸಿಗೆ ಉತ್ತರ ಬಂದಿಲ್ಲ-ಶಿಸ್ತುಕ್ರಮದ ಬಗ್ಗೆ ಪಕ್ಷ ತೀರ್ಮಾನಿಸಲಿದೆ: ಶಿವಕುಮಾರ್

ಪುತ್ತೂರು: ಬಿಜೆಪಿ ಮುಖಂಡನ ಪುತ್ರನ ಘಟನೆಯಿಂದಾಗಿ ಎರಡು ಬಾರಿ ಅವರನ್ನು ಸಂಪರ್ಕಿಸಿ ಪಕ್ಷಕ್ಕೆ ಮುಜುಗರ ಆಗುತ್ತದೆ. ನಿಮ್ಮ ನಿಲುವನ್ನು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟಪಡಿಸಬೇಕು ಎಂದು ತಿಳಿಸಿದ್ದೆವು. ಇದಕ್ಕೆ ಒಪ್ಪಿಗೆಯನ್ನೂ ನೀಡಿದ್ದರು. ಆದರೆ ಅವರು ಮಾಡಿಲ್ಲ ಎಂಬ ಕಾರಣಕ್ಕೆ ಜೂ.೪ರಂದು ಅವರಿಗೆ ಶೋಕಾಸ್ ನೋಟೀಸು ನೀಡಲಾಗಿದೆ. ಅವರು ಆ ಸಂದರ್ಭ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಏಳು ದಿನಗಳ ಒಳಗೆ ನೋಟೀಸಿಗೆ ಉತ್ತರ ನೀಡಬೇಕು. ಆದರೆ ಅವರು ಇನ್ನೂ ಉತ್ತರ ನೀಡಿಲ್ಲ. ಹಾಗಾಗಿ ಮುಂದಿನ ಕ್ರಮದ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ ಎಂದು ನಗರ ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪಕ್ಷದ ನಿಲು ಸ್ಪಷ್ಟವಾಗಿದೆ. ನಾವು ಸಂತ್ರಸ್ತೆಯ ಪರವಾಗಿದ್ದೇವೆ. ಎರಡು ಕುಟುಂಬಗಳ ವಿಚಾರವಾದ್ದರಿಂದ ಒಳ್ಳೆಯದರಲ್ಲಿ ಮುಗಿಯಬಹುದು ಸಮಸ್ಯೆ ಬೇಡವೆಂದು ಸುಮ್ಮನಿದ್ದೆವು ಎಂದು ತಿಳಿಸಿದರು.

ಜು.14 ಮರಳು-ಕಲ್ಲಿಗಾಗಿ ಪ್ರತಿಭಟನೆ ಪಾದಯಾತ್ರೆ:

ಜಿಲ್ಲೆಯಲ್ಲಿ ಎರಡು ತಿಂಗಳಿಂದ ಪ್ರಾಕೃತಿಕವಾಗಿ ಸಿಗುವ ಮರಳು, ಕೆಂಪು ಕಲ್ಲು ಅಭಾವದಿಂದ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜು.14ರಂದು ಬೆಳಗ್ಗೆ ಪುತ್ತೂರಿನ ಅವರ್ ಜವಾನ್ ಸ್ಮಾರಕದ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮೊದಲು ನೆಲ್ಲಿಕಟ್ಟೆ ಖಾಸಗೀ ಬಸ್ ನಿಲ್ದಾಣದಿಂದ ಕಿಲ್ಲೆ ಮೈದಾನದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದರು.

ಮರಳು, ಕಲ್ಲಿನ ಅಭಾವದಿಂದ ಕಟ್ಟಡ ಕಾರ್ಮಿಕರು, ಕಲ್ಲು ಕೋರೆ ಕಾರ್ಮಿಕರು, ಮರಳು ತೆಗೆಯುವ ಕಾರ್ಮಿಕರು, ಸಣ್ಣ ಸಣ್ಣ ಗುತ್ತಿಗೆದಾರರು, ಟೆಂಪೋ, ಲಾರಿ, ಜೆಸಿಬಿ ಚಾಲಕ ವರ್ಗ ಹಾಗೂ ಹಳ್ಳಿಯಲ್ಲಿ ಮನೆ ನಿರ್ಮಾಣ ಮಾಡುವ ಬಡ ವರ್ಗ ಇವತ್ತು ಒಪ್ಪತ್ತಿನ ಊಟಕ್ಕೆ ಸಮಸ್ಯೆಯಾಗಿ ಕುಟುಂಬ ಬೀದಿ ಪಾಲಾಗುವ ಮಟ್ಟಕ್ಕೆ ತಲುಪಿದೆ. ಎರಡು ವರ್ಷದಿಂದ ಬಡವರಿಗೆ ವಸತಿ ಯೋಜನೆಯ ನಿವೇಶನ ಹಾಗೂ ಮನೆ ಮಂಜೂರಾತಿ ಆಗುತ್ತಿಲ್ಲ. 9/11 ಸಮಸ್ಯೆ, ಪಡಿತರ ಚೀಟಿ ಸಮಸ್ಯೆಯಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪರಿಹಾರ ಒದಗಿಸಬೇಕು. ಕಾರ್ಮಿಕರಿಗೆ ಉದ್ಯೋಗ ಸಿಗುವ ಕಾರ್ಯವಾಗಬೇಕು ಎಂಬ ಆಗ್ರಹವನ್ನಿಟ್ಟುಕೊಂಡು ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article