ಯುವ ಜನಾಂಗ ಮಾದಕವಸ್ತುಗಳ ವಿರುದ್ಧ ಜಾಗೃತರಾಗುವುದು ಅತ್ಯವಶ್ಯಕ: ಹೇಮಚಂದ್ರ

ಯುವ ಜನಾಂಗ ಮಾದಕವಸ್ತುಗಳ ವಿರುದ್ಧ ಜಾಗೃತರಾಗುವುದು ಅತ್ಯವಶ್ಯಕ: ಹೇಮಚಂದ್ರ


ಸುಬ್ರಹ್ಮಣ್ಯ: ಯುವ ಜನಾಂಗವು ಮಾದಕ ವಸ್ತು ಸೇವನೆ ವಿರುದ್ಧ ಜಾಗೃತರಾಗುವುದು ಅತ್ಯಗತ್ಯ. ವಿದ್ಯಾರ್ಥಿಗಳು ಇಂತಹ ಚಟಗಳಿಗೆ ದಾಸರಾಗಬಾರದು. ಇದು ಆರೋಗ್ಯಕ್ಕೆ ಹಾನಿಕರ. ಮಾದಕ ವಸ್ತು ಸೇವನೆ ನಿಯಂತ್ರಣಕ್ಕೆ ಶಾಸನ ಮಾಡಲಾಗಿದೆ. ಮಾದಕ ವಸ್ತು ವಿತರಣೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾದವಾಗಿದೆ. ಇದಕ್ಕೆ ಜೈಲು ಶಿಕ್ಷೆ ಮತ್ತು ದಂಡ ವಿದಿಸಲಾಗುತ್ತದೆ ಎಂದು ಸುಬ್ರಹ್ಮಣ್ಯ ಪೊಲಿಸ್ ಠಾಣೆಯ ಸಿಬ್ಬಂದಿ ಹೇಮಚಂದ್ರ ಹೇಳಿದರು.

ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜು ಮತ್ತು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆದ ಮಾದಕ ವಸ್ತು ನಿಯಂತ್ರಣ ಹಾಗೂ ಪೋಕ್ಸೋ ಕಾಯಿದೆ ಬಗ್ಗೆ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಗಳ ತೊಂದರೆಗಳ ಬಗ್ಗೆ ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು ಎಂದರು.

ಮಾಹಿತಿಯಿಂದ ಜಾಗೃತಿ:

ಸುಬ್ರಹ್ಮಣ್ಯ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಪ್ರಮೀಳಾ ಪೋಕ್ಸೋ ಕಾಯಿದೆಯ ಬಗ್ಗೆ ತಿಳಿಸಿದರು. ಅಲ್ಲದೆ ಈ ಕಾಯಿದೆಯಿಂದ ಆಗುವ ಅನುಕೂಲತೆಗಳನ್ನು ತಿಳಿಸಿದರು.

ಸುಬ್ರಹ್ಮಣ್ಯ ಠಾಣೆಯ ಎಎಸ್‌ಐ ತೋಮಸ್ ಅವರು ಮೋಟಾರ್ ವಾಹನ ಕಾಯಿದೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಪೊಲೀಸ್ ಸಿಬ್ಬಂದಿ ಜಕ್ಕವ್ವ ಅವರು ಕಾಲೇಜಿನ ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಜಯಪ್ರಕಾಶ್. ಆರ್ ಮುಖ್ಯ ಅತಿಥಿಗಳಾಗಿದ್ದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದು ಮಾಹಿತಿ ಪಡೆದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article