
ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ.ಅವರಿಗೆ ಸುಭಾಷ್ ಚಂದ್ರ ಬೋಸ್ ಐಕಾನ್ ಅವಾರ್ಡ್-2025
Friday, July 25, 2025
ಉಜಿರೆ: ಕಳೆದ 13 ವರ್ಷಗಳಿಂದ ನಿರಂತರವಾಗಿ ಸಮಾಜದಿಂದ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ರಾಜ ಕೇಸರಿ ಟ್ರಸ್ಟನ್ನು ಹುಟ್ಟಿಹಾಕಿ ಶ್ರಮಿಕ ಯುವಕರನ್ನು ಒಟ್ಟುಗೂಡಿಸಿ, ಅವರ ಕೈಲಾದ ಸೇವೆಯ ಮೂಲಕ ಸಮಾಜದ ದಾನಿಗಳ ನೆರವಿನಿಂದ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿ, ಎಷ್ಟೋ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿ ಜನ ಸೇವಾ ಮನೋಭಾವದ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವಂತಹ ಸೇವಾ ಸಂಘಟನೆಯಾದ ರಾಜ ಕೇಸರಿ ಸಂಘಟನೆಯನ್ನು ಮುನ್ನಡೆಸುತ್ತಿರುವ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಅವರಿಗೆ ಜೀವನ್ ಜಾಗೃತಿ ಸೇವಾ ಸಂಸ್ಥೆ ವತಿಯಿಂದ ಸುಭಾಷ್ ಚಂದ್ರ ಬೋಸ್ ಐಕಾನ್ ಪ್ರಶಸ್ತಿ-2025 ಲಭಿಸಿದೆ.