
ಚರಂಡಿಗೆ ಜಾರಿದ ಸರಕು ಸಾಗಾಟ ವಾಹನ
Thursday, July 17, 2025
ಉಜಿರೆ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ತಿರುವಿನಲ್ಲಿ ಉಜಿರೆ ಕಡೆ ಸಾಗುತ್ತಿದ್ದ ಸರಕು ಸಾಗಾಟ ವಾಹನ ಚರಂಡಿ ಬದಿ ಹಾಕಿರುವ ಮಣ್ಣಿನಲ್ಲಿ ಹೂತುಹೋದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಇದರಿಂದ ಇತರ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಹೆದ್ದಾರಿ ಅಭಿವೃದ್ಧಿ, ಪೈಪ್ಲೈನ್, ಭೂಗತ ಕೇಬಲ್ ಅಳವಡಿಕೆ ಇತ್ಯಾದಿಗಳಿಗಾಗಿ ರಸ್ತೆ ಬದಿ ಅಗೆದು ಹಾಕಲಾಗಿದ್ದು, ಮಳೆಗೆ ಮಣ್ಣು ಸಡಿಲಗೊಂಡಿದೆ. ರಸ್ತೆ ಬದಿಯಲ್ಲಿ ಚಲಿಸುವ ವಾಹನಗಳು ಅಲ್ಲಲ್ಲಿ ಸಿಲುಕಿ ಕೊಳ್ಳುವುದು ಕಂಡು ಬರುತ್ತಿದೆ.