
ನಾಪತ್ತೆ ಆಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
Friday, July 18, 2025
ಉಳ್ಳಾಲ: ಉಳ್ಳಾಲ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಆಶ್ರಯಕಾಲೊನಿಯ ನಿವಾಸಿ ಕೇಶವ ಶೆಟ್ಟಿ (64) ಅವರ ಮೃತದೇಹ ಶುಕ್ರವಾರ ಮಧ್ಯಾಹ್ನ ವೇಳೆಗೆ ಉಚ್ಚಿಲ ಹೊಳೆಯಲ್ಲಿ ಪತ್ತೆ ಆಗಿದೆ.
ಜು.16 ರಂದು ಕೇಶವ ಶೆಟ್ಟಿ ನಾಪತ್ತೆ ಆಗಿದ್ದರು. ಅವರ ಕೊಡೆ ಪಿಲಾರ್ ಹೊಳೆಯ ಬದಿ ಪತ್ತೆಯಾಗಿತ್ತು. ಹಿನ್ನೆಲೆಯಲ್ಲಿ ಕೇಶವ ಶೆಟ್ಟಿ ಅವರ ಪತ್ತೆಗಾಗಿ ಹೊಳೆ ಉದಕ್ಕೂ ಕಾರ್ಯಾಚರಣೆ ನಡೆಸಲಾಗಿದ್ದು, ಶುಕ್ರವಾರ ಮಧ್ಯಾಹ್ನ ವೇಳೆಗೆ ಅವರು ಬಿದ್ದ ಜಾಗದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಉಚ್ಚಿಲ ಹೊಳೆಯಲ್ಲಿ ಅವರ ಮೃತ ದೇಹ ಪತ್ತೇಯಾಗಿದೆ.
ಘಟನಾ ಸ್ಥಳದಲ್ಲಿ ಸ್ಥಳದಲ್ಲಿ ತಹಶೀಲ್ದಾರ್, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.