ಧರ್ಮಸ್ಥಳ ಕ್ಷೇತ್ರದ ಮೇಲಾಗುವ ಅಪಪ್ರಚಾರ: ಕಲ್ಲಡ್ಕ ಶಾರದಾ ಸೇವಾ ಪ್ರತಿಷ್ಠಾನ ಖಂಡನೆ

ಧರ್ಮಸ್ಥಳ ಕ್ಷೇತ್ರದ ಮೇಲಾಗುವ ಅಪಪ್ರಚಾರ: ಕಲ್ಲಡ್ಕ ಶಾರದಾ ಸೇವಾ ಪ್ರತಿಷ್ಠಾನ ಖಂಡನೆ

ಬಂಟ್ವಾಳ: ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮತಾಂಧ ಶಕ್ತಿಗಳ ಕೃಪಾಪೋಷಿತ ಅಪಪ್ರಚಾರದ ದಾಳಿ ಕ್ಷೇತ್ರದ ಸಮಸ್ತ ಭಕ್ತಾಭಿಮಾನಿಗಳಿಗೆ ನೋವನ್ನು ತಂದಿದೆ. ಒಬ್ಬ ಧಾರ್ಮಿಕ ನಾಯಕರನ್ನು ಯಾವುದೇ ಸಾಕ್ಷ್ಯಾದಾರವಿಲ್ಲದೆ ಅಪರಾದಿಗಳಂತೆ ಬಿಂಬಿಸುವುದನ್ನು ಕಲ್ಲಡ್ಕ ಶಾರದಾ ಸೇವಾ ಪ್ರತಿಷ್ಠಾನವು ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪೂರ್ವಗ್ರಹ ಪೀಡಿತ ವ್ಯಕ್ತಿಗಳು ಎಐ ತಂತ್ರಜ್ಞಾನದ ವೀಡಿಯೋಗಳನ್ನು ಸೃಷ್ಟಿಸಿ ಇದುವೆ ಸತ್ಯ ಎಂದು ನಂಬಿಸುವ ಯತ್ನವನ್ನು ಮತ್ತು ಅನ್ಯದರ್ಮೀಯನೊಬ್ಬ ಯಾವುದೇ ದಾಖಲೆಗಳಿಲ್ಲದೆ ಶ್ರೀ ಕ್ಷೇತ್ರದ ಬಗ್ಗೆ ಜಾಲತಾಣದಲ್ಲಿ ಅಪಪ್ರಚಾರ ಮಾಡುತಿದ್ದು ಸಮಸ್ತ ಭಕ್ತರ ಧಾರ್ಮಿಕ ಶ್ರದ್ದೆಗೆ ಮಾಡಿದ ಅಪಚಾರವಾಗಿದೆ ಎಂದು ಪ್ರಕಟಣೆಯಲ್ಲಿ ಪ್ರತಿಷ್ಠಾನ ಆಕ್ರೋಶ ವ್ಯಕ್ತಪಡಿಸಿದೆ.

ಈ ವಿದ್ಯಮಾನ ಮುಂದಿನ ದಿನಗಳಲ್ಲಿ ಕೋಮುಬಾವನೆಯನ್ನು ಕೆರಳಿಸಲು ಕಾರಣವಾಗುವ ಸಾಧ್ಯತೆಯು ಇದ್ದು, ಈ ಬಗ್ಗೆ ಗೃಹ ಇಲಾಖೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಯಾರಲ್ಲಾದರೂ ಯಾವುದೇ ಪ್ರಕರಣದ ಸಾಕ್ಷಿ ದಾಖಲೆಗಳು ಇದ್ದರೆ ಸುಪ್ರಿಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಅಪರಾದಿಗಳಿಗೆ ಶಿಕ್ಷೆ ಆಗುವುದಕ್ಕೆ ಪ್ರತಿಷ್ಠಾನವು ಬೆಂಬಲಿಸಲಿದೆ. ವಯಕ್ತಿಕ ದ್ವೇಷಕ್ಕಾಗಿ ಸ್ವಯಂ ಆರೋಪ ಮಾಡಿ ಭಕ್ತರ ಮನಸಿಗೆ ನೋವುಂಟು ಮಾಡುವ ಕೃತ್ಯವನ್ನು ಪ್ರತಿಷ್ಠಾನವು ಸಹಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article