ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ: ಲಕ್ಷಾಂತರ ರೂ. ವಂಚನೆ
ಬಂಟ್ವಾಳ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯ ನೆಪದಲ್ಲಿ ವ್ಯಕ್ತಿಯೋರ್ವರು ಲಕ್ಷಾಂತರ ರೂ.ಕಳೆದುಕೊಂಡ ವಂಚನೆಗೊಳಗಾದ ಘಟನೆ ನಡೆದಿದ್ದು, ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ಚಾಳ ತಾಲೂಕಿನ ಸುಬ್ರಹ್ಮಣ್ಯ ಪಿ ಎಂಬವರು ಮೋಸಹೋಗಿದ್ದು, ಸುಮಾರು 24.90 ಲ.ರೂ. ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಯೋರ್ವ ಇವರಿಗೆ ಕರೆ ಮಾಡಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯ ನೆಪದಲ್ಲಿ ಅಪ್‌ವೊಂದರ ಲಿಂಕ್ ಕಳಿಸಿದ್ದನೆನ್ನಲಾಗಿದೆ.
ಕನಿಷ್ಠ 5 ಸಾ.ರೂ. ಹೂಡಿಕೆ ಮಾಡಿ ಖಾತೆ ತೆರೆಯಲು ತಿಳಿಸಿದ್ದು, ಸುಬ್ರಹ್ಮಣ್ಯ ಅವರು 40 ಸಾ.ರೂ. ಹಣ ಹಾಕಿ ಖಾತೆ ತೆರೆದಿರುತ್ತಾರೆ.
ನಂತರ ಅದರಲ್ಲಿ ಷೇರು ಮಾರ್ಕೆಟ್‌ಗಾಗಿ ಹಣ ಹೂಡಿಕೆ ಮಾಡಲು ತಿಳಿಸಿದ್ದು,ಅದರಂತೆ ಖಾತೆ ತೆರೆಯಲು ಹಾಕಿರುವ 40 ಸಾ.ಹಣದಲ್ಲಿ 1,000 ಹಣವನ್ನು ಪಡೆದಿದ್ದು, ನಂತರ ಷೇರು ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಲು ವಂಚಕರ ಖಾತೆಗಳಿಗೆ ಹಂತ, ಹಂತವಾಗಿ 24.90 ಲ.ರೂ. ಹಣವನ್ನು ಹಾಕಿದ್ದಾರೆ. ಅದರಲ್ಲಿ ಅವರು ಹಣವನ್ನು ವಿಥ್ ಡ್ರಾ ಮಾಡಲು ಹೋದಾಗ ವಿಥ್ ಡ್ರಾ ಆಗಿರುವುದಿಲ್ಲ. ಇದರಿಂದ ಅನುಮಾನಗೊಂಡ ಅವರು ಮೊಇಸ ಹೊಇಗಿರುವುದು ಖಚಿತವಾದಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.