ಗ್ಯಾಸ್ ಸಿಲಿಂಡರ್ ಕಳವು
Wednesday, August 6, 2025
ಬಂಟ್ವಾಳ: ಪಿಕ್‌ಅಪ್ ವಾಹನದಲ್ಲಿ ಲೋಡ್ ಮಾಡಿಟ್ಟಿದ್ದ ಅಡುಗೆ ಅನಿಲ ಸಿಲಿಂಡರ್ ಪೈಕಿ ಎರಡು ಗ್ಯಾಸ್ ಸಿಲಿಂಡರನ್ನು ಕಳವುಗೈದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕರಿಯಂಗಳ ಗ್ರಾಮದ ಪೊಳಲಿಯ ತೇಜರಾಜ್ ಎಂಬವರ ದೂರಿನಂತೆ ಕೇಸು ದಾಖಲಾಗಿದೆ. ಜು.30 ರಂದು ಗ್ಯಾಸ್‌ಲೈನ್ ಸೇಲ್ ಮುಗಿಸಿಕೊಂಡು ಸಂಜೆ ಮನೆಗೆ ಬಂದು ಪಿಕ್ ಅಪ್‌ನ್ನು ಮನೆಯ ಬಳಿ ನಿಲ್ಲಿಸಿದ್ದಲ್ಲದೆ ರಾತ್ರಿ ಮತ್ತೆ ಪರಿಶೀಲಿಸಿದ್ದಾಗಿದೆ.
ಮರುದಿನ ಬೆಳಗ್ಗೆ ಪಿಕ್‌ಅಪ್ ಪರಿಶೀಲಿಸಿದಾಗ ಗ್ಯಾಸ್ ಸಿಲಿಂಡರ್ ಪೈಕಿ ಎರಡು ಗ್ಯಾಸ್ ಸಿಲಿಂಡರನ್ನು ಕಳವು ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.