ಆ.18 ರಂದು ‘ಎಕ್ಸ್‌ಲರೇಟ್-2025’, ‘ಸೈನ್ಸ್ ಫೆಸ್ಟ್’
ವಿಜ್ಞಾನ ಕೇವಲ ಅಂಕ ಗಳಿಕೆಯ ವಿಷಯ ಮಾತ್ರವಾಗಿರದೆ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಿ ಅವರಲ್ಲಿರುವ ಚಿಂತನಾ ಕೌಶಲವನ್ನು ಒರೆಗೆ ಹಚ್ಚುವ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಲೇಜಿನ ಮಾಹಿತಿ ತಂತ್ರಜ್ಞ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್ ಮಾತನಾಡಿ, ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ ಮೊದಲ ಬಾರಿಗೆ ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು, ಭಾಗವಹಿಸಲು ಇಚ್ಛಿಸುವ ಶಾಲಾ ತಂಡಗಳು ಆನ್‌ಲೈನ್ ಮೂಲಕ ಛ್ಝಿಛ್ಟಿZಠಿಛಿ.ಛ್ಡಿmಛ್ಟಿಠಿಛಿb.ಟ.ಜ್ಞಿ ?eಠಿಠಿm://ಛ್ಝಿಛ್ಟಿZಠಿಛಿ.ಛ್ಡಿmಛ್ಟಿಠಿಛಿb.ಟ.ಜ್ಞಿ/| ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೆ.20 ನೋಂದಣಿಗೆ ಕೊನೆಯ ದಿನಾಂಕವಾಗಿದ್ದು, ವೈಯಕ್ತಿಕ ನೋಂದಣಿಗೆ ಅವಕಾಶವಿಲ್ಲ. ಶಾಲೆಯಿಂದಲೇ ನೋಂದಣಿ ಮಾಡಿಸಬೇಕು. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ದೊರೆಯಲಿದ್ದು, ಅತೀ ಹೆಚ್ಚು ಅಂಕ ಪಡೆದ ಶಾಲೆಗೆ ಸಮಗ್ರ ಪ್ರಶಸ್ತಿ ದೊರೆಯಲಿದೆ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ದೊರೆಯಲಿದೆ ಎಂದರು.
ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್, ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಬಿ. ರಕ್ಷಿತಾ ಪ್ರಭು ಉಪಸ್ಥಿತರಿದ್ದರು.
