
ಡಾ. ಮೌನಿಕಾ ದೇವಿಯವರಿಗೆ ರಾಜ್ಯಮಟ್ಟದ ಪ್ರಬಂಧ ಮಂಡನೆಯಲ್ಲಿ ಎರಡನೇ ಸ್ಥಾನ
Monday, August 11, 2025
ಮಂಗಳೂರು: ಅಖಿಲ ಕರ್ನಾಟಕ ಅರಿವಳಿಕಾ ಶಾಸ್ತ್ರಜ್ಞರ ವಾರ್ಷಿಕ ಸಮಾವೇಶ, ‘ಇಸಾಕಾನ್ ಕರ್ನಾಟಕ-2025 ಮಂಗಳೂರು’ ಆ.8 ರಿಂದ 10 ರವರೆಗೆ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕೆಎಸ್ ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ (ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ) ಅರಿವಳಿಕೆ ಶಾಸ್ತ್ರದ ಮೂರನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಪೀಲ ಮೌನಿಕ ದೇವಿ ಅವರು ಪ್ರಬಂಧ ಮಂಡನಾ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.
ಸಮಾವೇಶದಲ್ಲಿ ಸುಮಾರು 580ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮಂಡಿಸಲ್ಪಟ್ಟವು. ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಇವರನ್ನು ಅಭಿನಂದಿಸಿದೆ.