ಊರ್ವಸ್ಟೋರ್ ರಸ್ತೆ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್‌ಐ ಪ್ರತಿಭಟನೆ

ಊರ್ವಸ್ಟೋರ್ ರಸ್ತೆ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್‌ಐ ಪ್ರತಿಭಟನೆ


ಮಂಗಳೂರು: ಊರ್ವಸ್ಟೋರ್-ಕೋಡಿಕಲ್-ಸುಂಕದಕಟ್ಟೆ ಸಂಪರ್ಕ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ನಿರ್ಮಾಣ ಆಗಿರುವ ಗುಂಡಿಗಳನ್ನು ಮುಚ್ಚಿ ದುರಸ್ಥಿಗೆ ಆಗ್ರಹಿಸಿ ಇಂದು ಊರ್ವಸ್ಟೋರಿನಲ್ಲಿ ಡಿವೈಎಫ್‌ಐ ಊರ್ವಸ್ಟೋರ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ನಗರದ ಹಲವೆಡೆ ರಸ್ತೆಗಳು ಹೊಂಡಮಾಯವಾಗಿದೆ ರಸ್ತೆ ಗುಂಡಿಗಳಿಗೆ ಬಿದ್ದು ಯುವಜನರು ಸಾವು ನೋವು ಅನುಭವಿಸುತ್ತಿದ್ದಾರೆ ನಗರ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಳೆಯುತ್ತಿದ್ದಾರೆ ಜನಪ್ರತಿನಿದಿನಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಟೀಕಿಸಿದ ಅವರು ಮಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಒತ್ತಾಯಿಸಿ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗಿರುವ ಪರಿಸ್ಥಿತಿ ನಿರ್ಮಾಣ ಆಗಿರುವುದು ದುರಾದೃಷ್ಟ ಎಂದು ಹೇಳಿದರು.

ಸ್ಥಳೀಯ ಡಿವೈಎಫ್‌ಐ ಮುಖಂಡ ರಾಜೇಶ್ ಕುಲಾಲ್ ಮಾತನಾಡಿ, ಊರ್ವಸ್ಟೋರಿನ ಮುಖ್ಯ ರಸ್ತೆಯ ಅವ್ಯವಸ್ಥೆಯಿಂದ ಜನ ನಡೆದಾಡಲು ಆಗದ ಪರಿಸ್ಥಿತಿ, ಗುಂಡಿ ಬಿದ್ದು ರಸ್ತೆ ಕೆಸರುಮಯಗೊಂಡಿರುವುದರಿಂದ ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ ಎಂದರು.

ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಮನೋಜ್ ಕುಲಾಲ್, ಪ್ರಕಾಶ್, ಉಮಾಶಂಕರ್, ರಿಕ್ಷಾ ಚಾಲಕರ ಸಂಘದ ಇಕ್ಬಾಲ್, ದಲಿತ ಹಕ್ಕುಗಳ ಸಮಿತಿಯ ಮುಖಂಡ ರಘುವೀರ್, ಡಿವೈಎಫ್‌ಐ ಮುಖಂಡರಾದ ಪುನೀತ್ ಸುಧಾಕರ್, ಸುಕೇಶ್, ಪ್ರದೀಪ್ ಕುಲಾಲ್, ಪ್ರಶಾಂತ್ ಆಚಾರ್ಯ, ಪ್ರಶಾಂತ್ ಎಂ.ಬಿ, ನಿತ್ಯಾನಂದ, ಕಿಶೋರ್, ಸನತ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article